ಭೋಪಾಲ್: ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ಕಟ್ಟಡ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಹೈಡ್ರಾಮಾ ಸೃಷ್ಟಿಸಿದ ಘಟನೆ ಮಧ್ಯಪ್ರದೇಶದ ಸಾಗರ್ನಲ್ಲಿ ನಡೆದಿದೆ.
ಆತ್ಮಹತ್ಯೆ ಬೆದರಿಕೆ ಒಡ್ಡಿದ ವಿದ್ಯಾರ್ಥಿನಿಯನ್ನು ಸರಿತಾ ಡಂಗಿ ಎಂದು ಗುರುತಿಸಲಾಗಿದೆ. ಎಂಎ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಸರಿತಾ ಡಂಗಿ ಮಂಗಳವಾರ ಪರೀಕ್ಷೆ ಬರೆಯಲು ಕಾಲೇಜಿಗೆ ಬಂದಾಗ ಬ್ಯಾಗ್ ಹೊರಗೆ ಇಟ್ಟು ಪರೀಕ್ಷಾ ಕೊಠಡಿಗೆ ತೆರಳಿದ್ದಳು. ಪರೀಕ್ಷೆ ಮುಗಿಸಿ ಹೊರ ಬಂದಾಗ ವಿದ್ಯಾರ್ಥಿನಿಯ ಬ್ಯಾಗ್ ನಾಪತ್ತೆಯಾಗಿತ್ತು. ಈ ಕುರಿತು ಆಡಳಿತ ಮಂಡಳಿಗೆ ದೂರು ನೀಡಲು ತೆರಳಿದಾಗ ವಿದ್ಯಾರ್ಥಿನಿ ಅಳುವುದನ್ನ ನೋಡಿ ಕಾಲೇಜು ಸಿಬ್ಬಂದಿ ಗೇಲಿ ಮಾಡಿದ್ದರು. ಇದರಿಂದ ಕೋಪಗೊಂಡ ಯುವತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಾಲೇಜಿನ ಕಟ್ಟಡ ಏರಿದ್ದಾಳೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸ್ ಹಾಗೂ ಎನ್ಡಿಆರ್ಎಫ್ ಸಿಬ್ಬಂದಿ ಹರಸಾಹಸಪಟ್ಟು ವಿದ್ಯಾರ್ಥಿನಿಯ ಮನವೊಲಿಸಿ ಕಟ್ಟಡದಿಂದ ಕೆಳಗಿಳಿಸಿದ್ದಾರೆ.
PublicNext
29/06/2022 03:17 pm