ಲಖಿಂಪುರ ಖೇರಿ : ಶಾಲೆಯಲ್ಲಿ ಮಕ್ಕಳಿಗೆ ವಿದ್ಯೆ ಬುದ್ದಿ ಹೇಳಿಕೊಡಬೇಕಿದ್ದ ಪ್ರಾಂಶುಪಾಲರು ಶಿಕ್ಷಕಿಯೋರ್ವರು ತಡವಾಗಿ ಶಾಲೆಗೆ ಬಂದರು ಎಮಬ ಕಾರಣಕ್ಕೆ ಶೂನಿಂದ ಥಳಿಸಿದ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಮೃಗದಂತೆ ವರ್ತಿಸಿದ ಪ್ರಾಂಶುಪಾಲ ಮಹಿಳಾ ಶಿಕ್ಷಕರಿಗೆ ಥಳಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಶಿಕ್ಷಕಿ ಕೇವಲ 10 ನಿಮಿಷ ತಡವಾಗಿ ಬಂದಿದ್ದಕ್ಕೆ ಕೋಪಿತಗೊಂಡ ಪ್ರಾಂಶುಪಾಲ ಅಜಿತ್ ವರ್ಮಾ ಶಿಕ್ಷಕಿಯನ್ನು ಥಳಿಸಿದ್ದಾರೆ.
ಈ ಸಂಬಂಧ ಶಿಕ್ಷಕಿ ಖೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಿನ್ಸಿಪಾಲ್ ಅಜಿತ್ ವರ್ಮಾ ತನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಖಾಸಗಿ ವಾಹಿನಿಯ ವರದಿ ಪ್ರಕಾರ ಸದ್ಯ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಮೂಲ ಶಿಕ್ಷಾ ಅಧಿಕಾರಿ (ಬಿಎಸ್ಎ) ಲಕ್ಷ್ಮೀಕಾಂತ್ ಪಾಂಡೆ ಹೇಳಿದ್ದಾರೆ.
PublicNext
25/06/2022 03:55 pm