ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಹಾಡಹಗಲೇ 5 ಲಕ್ಷ ಹಣ ದೋಚಿ ಪರಾರಿ

ವಿಜಯಪುರ: ವ್ಯಕ್ತಿಯೋರ್ವನ ಬಳಿಯಿಂದ 5 ಲಕ್ಷ ರೂಪಾಯಿ ಹಣ ದೋಚಿದ ಖದೀಮರು ಪರಾರಿಯಾಗಿದ್ದಾರೆ. ವಿಜಯಪುರ ನಗರದ ತಾಜಬಾವಡಿ ಪ್ರದೇಶದ ಬಳಿ ಈ ಘಟನೆ ನಡೆದಿದೆ.

ಜಾಲಗೇರಿ ತಾಂಡಾದ ರಾಜು ರಾಠೋಡ ಎಂಬುವರೇ ಘಟನೆಯಲ್ಲಿ ಹಣ ಕಳೆದುಕೊಂಡವರು. ಕಬ್ಬು ಕಟಾವು ಮಾಡಿದವರಿಗೆ ಕೂಲಿ ನೀಡಲೆಂದು ರಾಜು ಅವರು ವಿಜಯಪುರ ನಗರದ ಬಿಎಲ್‌ಡಿ ಈ ರಸ್ತೆಯ ಎಸ್‌ಬಿಐ ಶಾಖೆಯ ಬ್ಯಾಂಕಿನಿಂದ ಹಣ ಡ್ರಾ ಮಾಡಿದ್ದರು. ನಂತರ ಹೊರಬಂದಾಗ ಅಟ್ಯಾಕ್ ಮಾಡಿದ ಖದೀಮರು ಒಟ್ಟು ಹಣ ದೋಚಿ ಪರಾರಿಯಾಗಿದ್ದಾರೆ.

ಹಣ ಕಳೆದುಕೊಂಡು, ಅಸಹಾಯಕನಾಗಿ, ನಿಸ್ತೇಜನಾಗಿ ಕಣ್ಣೀರಾಕುತ್ತ ಕುಳಿತ ರಾಜು ರಾಠೋಡ ಅವರಿಗೆ ಸ್ಥಳೀಯರು ನೀರು ಕುಡಿಸಿ, ಸಾಂತ್ವನ ಹೇಳಿದ್ದಾರೆ. ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿತರಿಗಾಗಿ ಹಾಗೂ ಪ್ರಕರಣದ ಸತ್ಯಾಸತ್ಯತೆ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Edited By : Nagesh Gaonkar
PublicNext

PublicNext

16/06/2022 08:26 pm

Cinque Terre

113.14 K

Cinque Terre

1