ಭೋಪಾಲ್: ಮೊಬೈಲ್ ಜಾಸ್ತಿ ಬಳಕೆ ಮಾಡಬೇಡ ಎಂದಿದಕ್ಕೆ ಸೊಸೆಯೊಬ್ಬಳು ತನ್ನ ಅತ್ತೆಯನ್ನೇ ಕೊಲೆಗೈದ ಘಟನೆ ಮಧ್ಯ ಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ನಡೆದಿದೆ.
ಕೊಲೆಗೈದ ಆರೋಪಿಯನ್ನು ದಾಮೋಹ್ ಜಿಲ್ಲೆಯ ಅಜಯ್ ವರ್ಮ ಎಂಬುವರ ಪತ್ನಿ ಎಂದು ಗುರುತಿಸಲಾಗಿದೆ. ಅಜಯ್ ಇಲ್ಲದ ಇಲ್ಲದ ವೇಳೆ ಆಕೆ ತಡ ರಾತ್ರಿವರೆಗೆ ಬೇರೆಯವರೊಂದಿಗೆ ಮಾತನಾಡುತ್ತಿದ್ದಳು. ಇದನ್ನ ಗಮನಿಸಿದ ಅಜಯ್ ತಾಯಿ ಸೊಸೆಗೆ ಹೆಚ್ಚಾಗಿ ಮೊಬೈಲ್ ಬಳಸಬೇಡ ಅಂತ ಬುದ್ಧಿ ಹೇಳಿದ್ದರು. ಇದೇ ವಿಚಾರಕ್ಕೆ ಅತ್ತೆ ಹಾಗೂ ಸೊಸೆ ನಡುವೆ ತೀವ್ರ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ಅತ್ತೆಯ ತಲೆಗೆ ದೊಣ್ಣೆಯಿಂದ ಹೊಡೆದು ಸೊಸೆ ಕೊಲೆ ಗೈದಿದ್ದಾಳೆ.
ಅತ್ತೆ ಸಾವನ್ನಪ್ಪಿದ ಬಳಿಕ ಮನೆಯಿಂದ ಹೊರ ಹೋದ ಸೊಸೆ, ಪತಿ ಬಂದು ಅಮ್ಮನ ಸಾವಿನ ಸುದ್ದಿ ತಿಳಿಸಿದ ಬಳಿಕ ಮನೆಗೆ ಮರಳಿದ್ದಾಳೆ. ವೃದ್ಧೆಯ ಅನುಮಾನಾಸ್ಪದ ಸಾವಿನ ಕುರಿತು ಪತಿ ತನಿಖೆಯನ್ನು ನಡೆಸುವಂತೆ ಪೊಲೀಸರ ಮೊರೆ ಹೋಗಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಸೊಸೆಯನ್ನ ತನಿಖೆಗೆ ಒಳಪಡಿಸಿದಾಗ ಆಕೆಯೇ ಈ ಕೃತ್ಯ ಎಸಗಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
PublicNext
16/06/2022 05:33 pm