ಮುಜಾಫರ್ ನಗರ: ಮದುವೆಯಲ್ಲಿ ವಧು ವರರು ತಮ್ಮ ಮದುವೆಯ ಸ್ಥಳಗಳಿಗೆ ರಥಗಳಲ್ಲಿ, ಕುದುರೆ ಮೇಲೆ,ವಿಮಾನದಲ್ಲಿ ಬರುವುದನ್ನು ಕಂಡಿದ್ದೇವೆ.ಆದರೆ ಉತ್ತರ ಪ್ರದೇಶದ ಮುಜಾಫರ್ ನಗರದ ಜನನಿಬಿಡ ರಸ್ತೆಯೊಂದರಲ್ಲಿ ವರನೊಬ್ಬ ತನ್ನ ಸ್ನೇಹಿತರೊಂದಿಗೆ ತೆರೆದ ಕಾರಿನಲ್ಲಿ ಡ್ಯಾನ್ಸ್ ಮಾಡುತ್ತಾ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇನ್ನು ಮದುಮಗ ಸೇರಿದಂತೆ ಸ್ನೇಹಿತರು ಚಲಿಸುತ್ತಿರುವ ತೆರೆದ ಕಾರಿನಲ್ಲಿ ಡೆಡ್ಲಿ ಸ್ಟಂಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ದುಬಾರಿ ಕಾರಿನಲ್ಲಿ ಹೀಗೆ ಡೆಡ್ಲಿ ಮೂಜು ಮಸ್ತಿ ಮಾಡುತ್ತಾ ಹೋಗುವಾಗ ಸಹ ಸಂಚಾರಿಗಳಿಗೆ ತೀರಾ ದೊರೆಯಾಗಿದೆ. ಹೀಗೆ ಕಿರಿಕಿರಿ ಅನುಭವಿಸಿದ ದಾರಿಹೋಕ ಅಂಕಿತ್ ಕುಮಾರ್ ವಿಡಿಯೋ ರೆಕಾರ್ಡ್ ಮಾಡಿ ಮುಜಫರನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ವಿಡಿಯೋ ನೋಡಿದ ಪೊಲೀಸರು ದೆಹಲಿ ನೋಂದಣಿ ಫಲಕಗಳನ್ನು ಹೊಂದಿರುವ ಒಂಬತ್ತು ಕಾರುಗಳ ಮಾಲೀಕರಿಗೆ 2 ಲಕ್ಷ ರೂ. ದಂಡ ವಿಧಿಸಿದ್ದಾರೆ.
PublicNext
15/06/2022 10:00 pm