ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಲ್ಲಿ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಪಾರ್ಟಿ-ಬಾಲಿವುಡ್ ನಟ ವಶಕ್ಕೆ ?

ಬೆಂಗಳೂರು: ಇಲ್ಲಿಯ ದಿ ಪಾರ್ಕ್ ಹೋಟೆಲ್‌ ನಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಡ್ರಗ್ಸ್ ಪಾರ್ಟಿ ನಡೆಯುತ್ತಿದೆ ಎಂಬ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಬಾಲಿವುಡ್ ನಟ ಸೇರಿದಂತೆ 50 ಹೆಚ್ಚು ಯುವಕ ಮತ್ತು ಯುವತಿಯರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ಸ್ಪೆಕ್ಟರ್ ಮಂಜನಾಥ್ ನೇತೃತ್ವದಲ್ಲಿ ಹಲಸೂರು ಪೊಲೀಸರು ರಾತ್ರಿ 12 ಗಂಟೆಗೆ ದಿ ಪಾರ್ಕ್ ಹೋಟೆಲ್‌ ಮೇಲೆ ದಾಳಿ ನಡಸಿ ಪರಿಶೀಲನೆ ನಡೆಸಿದ್ದರು.

30 ಪೊಲೀಸರನ್ನೊಳಗೊಂಡ ಈ ದಾಳಿಯಲ್ಲಿ ಯುವಕರು ಮತ್ತು ಯುವತಿಯರನ್ನ ವಶಕ್ಕೆ ಪಡೆದು, ಟಿಟಿ ಮೂಲಕ ವೈದ್ಯಕೀಯ ಪರೀಕ್ಷೆಗೂ ಕಳಿಸಿಕೊಡಲಾಗಿದೆ.

ಇದೇ ಪಾರ್ಟಿಯಲ್ಲಿ ಯುವತಿಯೊಂದಿಗೆ ಪಾರ್ಟಿಯಲ್ಲಿದ್ದ ಬಾಲಿವುಡ್‌ನಟನನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.ಈ ನಟ ತಂದೆ ಕೂಡ ಬಾಲಿವುಡ್‌ನ ಖ್ಯಾತ ಕಲಾವಿದರಾಗಿದ್ದು, ಈ ನಟನನ್ನ ಪೊಲೀಸರು ಠಾಣೆಯಲ್ಲಿಯೇ ವಿಚಾರಣೆ ನಡೆಸಿದ್ದಾರಂತೆ.

Edited By :
PublicNext

PublicNext

13/06/2022 07:58 am

Cinque Terre

54.42 K

Cinque Terre

5

ಸಂಬಂಧಿತ ಸುದ್ದಿ