ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅನಿಷ್ಟ-ಪಾಪದಳು ಎಂದು ಅತ್ತೆ ನಿಂದನೆ-22 ರ ಗೃಹಿಣಿ ಆತ್ಮಹತ್ಯೆ !

ಬೆಂಗಳೂರು: ಅತ್ತೆ ಮತ್ತು ಪತಿಯ ಕಿರುಕುಳಕ್ಕೆ 22 ಹರೆಯದ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ನೆಲಮಂಗಲದ ವೀವರ್ಸ್ ಕಾಲೋನಿಯಲ್ಲಿ ನಡೆದಿದೆ.

ಮೃತ ದುರ್ದೈವಿ ಅನ್ನು ಪೂಜಾ ಎಂದು ಗುರುತಿಸಲಾಗಿದ್ದು, ಪೂಜಾ ಕುಣಿಗಲ್ ಮೂಲವಳಾಗಿದ್ದಾಳೆ. ದುರಂತ ಅಂದ್ರೆ, ಬಾಡಿಗೆ ಮನೆಯಲ್ಲಿ ಹಾಲು ಉಕ್ಕಿಸಿದ ಕೆಲವೇ ಕ್ಷಣದಲ್ಲಿಯೇ ಪೂಜಾ ನೇಣು ಶರಣಾಗಿದ್ದಾಳೆ.

ಕಳೆದ ಎರಡು ವರ್ಷದ ಹಿಂದೆ ಪೂಜಾ ಮಂಜುನಾಥ್ ಜೊತೆಗೆ ಮದುವೆ ಆಗಿದ್ದಳು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ದಿನಗಳದಂತೆ ಪತಿ ಮಂಜುನಾಥ್ ಹಾಗೂ ಅತ್ತೆ ಶ್ಯಾಮಲಾರಿಂದ ಕಿರುಕುಳ ಶುರು ಆಗಿದೆ.

ಮೊದಲ ಮಗುವಿನ ಗರ್ಭಪಾತ ಆಗಿದೆ. ಎರಡನೇಯ ಮಗು ಹುಟ್ಟಿದ 6 ತಿಂಗಳಲ್ಲಿಯೇ ತೀರಿ ಹೋಗಿದೆ.ಈ ಕಾರಣಕ್ಕೇನೆ ಪೂಜಾ ಪಾಪದವಳು,ಅನಿಷ್ಟ ಎಂದು ಅತ್ತೆ ನಿಂದಿಸುತ್ತಿದ್ದಂತೆ. ಇದರಿಂದ ಕುಗ್ಗಿ ಹೋದ ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಪತಿ ಮಂಜುನಾಥ್ ಹಾಗೂ ಅತ್ತೆ ಶ್ಯಾಮಲಾರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.ನೆಲಮಂಲ ಠಾಣೆಯಲ್ಲಿ ಪ್ರಕರಣ ಈಗಾಗಲೇ ದಾಖಲಾಗಿದೆ.

Edited By :
PublicNext

PublicNext

06/06/2022 08:00 am

Cinque Terre

68.6 K

Cinque Terre

2

ಸಂಬಂಧಿತ ಸುದ್ದಿ