ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೈದರಾಬಾದ್: MLA ಪುತ್ರ ಸೇರಿ ಐವರಿಂದ ಕಾರಿನಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್​ ರೇಪ್.!

ಹೈದ್ರಾಬಾದ್: ತೆಲಂಗಾಣದ ರಾಜಧಾನಿ ಹೈದರಾಬಾದ್​​ನಲ್ಲಿ ಅಪ್ರಾಪ್ತೆ ಮೇಲೆ ಶಾಸಕನ ಪುತ್ರ ಸೇರಿ ಐವರು ಸಾಮೂಹಿಕ ಅತ್ಯಾಚಾರ ಎಸಗಿ ಪೈಶಾಚಿಕ ಕೃತ್ಯ ಮೆರೆದಿದ್ದಾರೆ.

ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಹೊತ್ತಿರುವ ಐವರೂ ಕೂಡ ಅಪ್ರಾಪ್ತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜೂನ್ 1ರಂದು ಕೃತ್ಯ ನಡೆದಿದ್ದು, ಐಪಿಸಿ ಸೆಕ್ಸನ್ 354 (ಗ್ಯಾಂಗ್ ರೇಪ್) ಮತ್ತು POCSO ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪೈಕಿ ಓರ್ವ ಎಂಇಐಎಂ (Majlis-E-Ittehadul Muslimeen) ಶಾಸಕನ ಪುತ್ರ, ಮತ್ತೊಬ್ಬ ಮೈನಾರಿಟಿ ಚೇರ್​​ಮನ್​​ ಅಧ್ಯಕ್ಷರ ಮಗ ಎಂದು ತಿಳಿದುಬಂದಿದೆ.

ಸಂತ್ರಸ್ತ 17 ವರ್ಷದ ಬಾಲಕಿಯನ್ನು ವೈದ್ಯಕೀಯ ತಪಾಷಣೆಗೆ ಒಳಪಡಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಪಾರ್ಟಿಯಲ್ಲಿ ಭಾಗಿಯಾಗಿದ್ದಾಗ ಅತ್ಯಾಚಾರ ನಡೆದಿದೆ. ಸಂತ್ರಸ್ತ ಯುವತಿ ಆರೋಪಿಗಳ ಹೆಸರನ್ನ ನೀಡಿದ್ದಾಳೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಮರ್ಸಿಡಿಸ್ ಕಾರಿನಲ್ಲಿ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ಮಗಳಿಗೆ ಕುತ್ತಿಗೆ ಸೇರಿದಂತೆ ಹಲವು ಕಡೆ ತೀವ್ರ ಗಾಯವಾಗಿದೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ.

Edited By : Vijay Kumar
PublicNext

PublicNext

03/06/2022 04:11 pm

Cinque Terre

67.28 K

Cinque Terre

22

ಸಂಬಂಧಿತ ಸುದ್ದಿ