ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯದಲ್ಲಿ ಲವ್ ಸೆಕ್ಸ್ ದೋಖ; ಮದ್ವೆಯಾಗುವುದಾಗಿ ವಿದ್ಯಾರ್ಥಿನಿಯ ಬಾಳಲ್ಲಿ ವಾರ್ಡನ್ ಚೆಲ್ಲಾಟ

ಮಂಡ್ಯ: ಹಾಸ್ಟೆಲ್ ವಾರ್ಡನ್‌ವೋರ್ವ ಮದುವೆಯಾಗುವ ನೆಪದಲ್ಲಿ ವಿದ್ಯಾರ್ಥಿನಿಯ ಬಾಳಲ್ಲಿ ಚೆಲ್ಲಾಟವಾಡಿರುವಂತಹ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ನಡೆದಿದೆ.

ಹಾಸ್ಟೆಲ್ ವಾರ್ಡನ್ ಬಣ್ಣದ ಮಾತಿಗೆ ಸೋತು ವಿದ್ಯಾರ್ಥಿನಿ ಜೀವನ ಹಾಳು ಮಾಡಿಕೊಂಡಿದ್ದಾಳೆ. ಮದುವೆ ಆಗೋ ಆಸೆ ಹುಟ್ಟಿಸಿ ವಾರ್ಡನ್ ಸತೀಶ್ ಕಾಮ ತೃಷೆ ತೀರಿಸಿಕೊಂಡಿದ್ದಾನೆ. ಓಬಿಸಿ ಹಾಸ್ಟಲ್‌ನಲ್ಲಿ ವಾರ್ಡನ್ ಆಗಿರುವ ಸತೀಶ್​ ಸಂತ್ರಸ್ತ ವಿದ್ಯಾರ್ಥಿಯನ್ನು ಪುಸಲಾಯಿಸಿ ತನ್ನ ಕೆಲಸ ಮುಗಿಸಿದ್ದಾನೆ. ನಿಶ್ಚಿತಾರ್ಥ ಮಾಡಿಕೊಂಡಿದ್ದ ಸತೀಶ್ ಪದೇ ಪದೇ ದೈಹಿಕ ಸಂಪರ್ಕ ಬೆಳೆಸಿದ್ದ. ಸತೀಶ್ ಮನೆಯಲ್ಲಿ ನಿಶ್ಚಿತಾರ್ಥ ಕುರಿತು ತಾಯಿ ಚಕಾರೆ ತೆಗೆದಿದ್ದಾರೆ. ಈ ವೇಳೆ ಗರ್ಭಿಣಿಯಾಗಿದ್ದ ವಿದ್ಯಾರ್ಥಿನಿಯನ್ನ ವಾರ್ಡನ್ ಮೂರು ಬಾರಿ ಅಬಾಷನ್ ಮಾಡಿಸಿದ್ದ.

ಮದುವೆಯಾಗುವಂತೆ ಸಂತ್ರಸ್ತೆ ಒತ್ತಾಯಿಸುತ್ತಿದ್ದಂತೆ ಸತೀಶ್ ಹೊಸ ವರ್ಸೆ ತೆಗೆದಿದ್ದು, ಸರ್ಕಾರಿ ನೌಕರೆಯನ್ನ ಮದುವೆಯಾಗುವುದಾಗಿ ಉಡಾಫೆ ಉತ್ತರ ನೀಡಿದ್ದಾನೆ. ನೊಂದ ಸಂತ್ರಸ್ತೆಯಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲು ಮಾಡಲಾಗಿದೆ.

ಪ್ರಕರಣ ದಾಖಲಾದರೂ ವಾರ್ಡನ್ ಸತೀಶ್ ಕ್ಯಾರೆ ಎನ್ನುತ್ತಿಲ್ಲ. ನನ್ನನ್ನ ಏನು ಮಾಡಲು ಸಾಧ್ಯವಿಲ್ಲ, ನನಗೆ ರಾಜಕಾರಣಿಗಳು ಗೊತ್ತು, ನಿನ್ನನ್ನ ಜೀವ ಸಮೇತ ಬಿಡುವುದಿಲ್ಲವೆಂದು ಅವಾಜ್ ಹಾಕಿದ್ದಾನೆ. ಪೊಲೀಸ್ ಇಲಾಖೆ ನನ್ನನ್ನ ಟಚ್ ಕೂಡ ಮಾಡಲು ಸಾಧ್ಯವಿಲ್ಲ. ನನ್ನ ತಂಟೆಗೆ ಬಂದರೆ ಜೀವ ಸಮೇತ ಉಳಿಸುವುದಿಲ್ಲವೆಂದು ಸಂತ್ರಸ್ಥೆಗೆ ಬೆದರಿಕೆ ಹಾಕಿದ್ದಾನೆ. ಪ್ರಕರಣ ದಾಖಲಾದರೂ ಪೊಲೀಸರು ಕ್ರಮ ಕೈಗೊಳ್ಳದಿರುವುದಕ್ಕೆ ಪೊಲೀಸರ ವಿರುದ್ಧ ಸಂತ್ರಸ್ತೆ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹಣ ಪಡೆದು ಆರೋಪಿಯನ್ನ ಬಿಟ್ಟು ಕಳಿಸಿರುವುದಾಗಿ ಸಂತ್ರಸ್ಥೆ ಕುಟುಂಬಸ್ಥರು ಆರೋಪಿಸಿದ್ದಾರೆ.

Edited By : Vijay Kumar
PublicNext

PublicNext

02/06/2022 04:56 pm

Cinque Terre

37.79 K

Cinque Terre

1

ಸಂಬಂಧಿತ ಸುದ್ದಿ