ಪಾಟ್ನಾ: ಸಹೋದರಿಯ ಸ್ನೇಹಿತೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿದ್ದಲ್ಲದೇ ಆಕೆಗೆ ಗರ್ಭಪಾತ ಮಾಡಿಸಿದ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.ಹೌದು ಸಹೋದರಿಯ ಸ್ನೇಹಿತೆಗೆ ಮದುವೆಯಾಗುವುದಾಗಿ ಪುಸಲಾಯಿಸಿ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾನೆ ಆಕೆ ಗರ್ಭಿಣಿಯಾಗುತ್ತಿದ್ದಂತೆ ಅವಳಿಗೆ ಅಮಲು ಪದಾರ್ಥ ನೀಡಿ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಿದ್ದಾನೆ.
ಈ ಹಿಂದೆ ಯುವತಿಯು ತನ್ನ ಹೆತ್ತವರಿಗೆ ಹುಡುಗನನ್ನು ಮದುವೆಯಾಗುವಂತೆ ಕೇಳಲು ಒತ್ತಾಯಿಸಿದಳು. ಆದರೆ ಅವಳ ಕುಟುಂಬವು ಸಹ ಈ ಬಗ್ಗೆ ಯಾವುದೇ ಗಮನ ನೀಡರಲಿಲ್ಲ. ಗರ್ಭಪಾತದ ನಂತರ ಆಕೆಯ ಆರೋಗ್ಯ ಹದಗೆಟ್ಟ ಬಳಿಕ ವಿಷಯ ಯುವತಿ ಮನೆಯವರಿಗೆ ತಿಳಿದೆ.
ಸದ್ಯ ಯುವತಿ ಆರೋಪಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಬಳಿಕ ಎಫ್ ಐಆರ್ ದಾಖಲಿಸಲಾಗಿದೆ. ಸದ್ಯ ಆರೋಪಿಯು ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ.
PublicNext
31/05/2022 10:39 pm