ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೃದ್ಧನ ಮೇಲೆ ಗ್ರಾಮಸ್ಥರ ದರ್ಪ : ಮೂತ್ರ ಕುಡಿಸಿ, ಮಲ ತಿನ್ನಿಸಿ ವಿಕೃತಿ!

ಕೋಲ್ಕತ್ತಾ: ಕೆಲವು ಸಂದರ್ಭದಲ್ಲಿ ಕೆಲವರು ಕೈಗೊಳ್ಳುವ ನಿರ್ಧಾರಗಳು ಎಲ್ಲರನ್ನು ಬೆಚ್ಚಿ ಬೀಳಿಸುತ್ತವೆ. ಸದ್ಯ ವಾಮಾಚಾರದ ಶಂಕೆಯಿಂದ ಗ್ರಾಮಸ್ಥರೆಲ್ಲರೂ ಸೇರಿ ವೃದ್ಧರೊಬ್ಬರಿಗೆ ಬಲವಂತವಾಗಿ ಮೂತ್ರ ಕುಡಿಸಿ, ಮಲ ತಿನ್ನಿಸಿ ವಿಕೃತಿ ಮೆರೆದಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನ ಮಥುರಾಪುರ ಗ್ರಾಮದಲ್ಲಿ ನಡೆದಿದೆ.

ಇನ್ನು ಗ್ರಾಮಸ್ಥರು ಮಾಡಿದ ಅವಮಾನ ತಾಳದ ವೃದ್ಧ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ

ಪಶ್ಚಿಮ ಬಂಗಾಳದ ರಘುನಾಥಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಣಿಕ್ ಸರ್ದಾರ್ (68) ಆತ್ಮಹತ್ಯೆ ಮಾಡಿಕೊಂಡ ವೃದ್ಧ.

ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಮೊಮ್ಮಗಳನ್ನು ಮಾಣಿಕ್ ಸರ್ದಾರ್ ನಗರದ ಓಜಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ. ಆದರೆ ನೆರೆಯವರು ಮಾಣಿಕ್ ಸರ್ದಾರ್ ನಾಲ್ವರೊಂದಿಗೆ ಸೇರಿ ವಾಮಾಚಾರ ಮಾಡಿದ್ದಾರೆ ಇದರಿಂದಾಗಿಯೇ ಬಾಲಕಿ ಸಾವಿಗೆ ಕಾರಣವೆಂದು ತಿಳಿದಿದ್ದಾರೆ.

ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಬಲವಂತವಾಗಿ ಮೂತ್ರ ಕುಡಿಸಿ, ಮಲ ತಿನ್ನಿಸಿದ್ದಾರೆ. ಇದರಿಂದ ಮನನೊಂದ ವೃದ್ಧ ಅವಮಾನ ತಾಳಲಾರದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಭೇಟಿ ನೀಡಿದ ರಘುನಾಥಗಂಜ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Edited By : Nirmala Aralikatti
PublicNext

PublicNext

31/05/2022 09:08 pm

Cinque Terre

119.46 K

Cinque Terre

13

ಸಂಬಂಧಿತ ಸುದ್ದಿ