ಹಾಸನ: ವಿವಾಹಿತೆಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಗ್ರಾಮದಲ್ಲಿ ನಡೆದಿದೆ. ಈ ಕಾರಣಕ್ಕೆ ಪತಿ ಹಾಗೂ ಪತ್ನಿಯ ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ರಂಜಿತಾ (31) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರಂಜಿತಾ ಸಾವಿನಿಂದ ರೊಚ್ಚಿಗೆದ್ದ ಕುಟುಂಬಸ್ಥರು ಪತಿ ಮನೆಯ ಓರ್ವ ವ್ಯಕ್ತಿಗೆ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಗಂಡನ ಮನೆಯವರೇ ನಮ್ಮ ಮಗಳನ್ನು ನೇಣಿಗೇರಿಸಿ ಕೊಲೆ ಮಾಡಿದ್ದಾರೆ ಎಂಬುದು ರಂಜಿತಾ ಮನೆಯವರ ಆರೋಪವಾಗಿದೆ. ಕೂಡಲೇ ಮಧ್ಯಪ್ರವೇಶಸಿದ ಪೊಲೀಸರು ಉದ್ರಿಕ್ತರನ್ನು ನಿಯಂತ್ರಿಸಿ ಪರಿಸ್ಥಿತಿನ ನಿಯಂತ್ರಣಕ್ಕೆ ತಂದಿದ್ದಾರೆ.
ನಮ್ಮ ಮಗಳಿಗೆ ಪತಿ ಅಕ್ಷಯ್ ಆತನ ತಂದೆ ಅಶೋಕ್ ಹಾಗೂ ತಾಯಿ ಸೇರಿದಂತೆ ಕುಟುಂಬದ ಇತರರು ಕಿರುಕುಳ ನೀಡಿದ್ದಾರೆ. ಮಗಳ ಮೇಲೆ ಹಲ್ಲೆ ಮಾಡಿ ನಂತರ ಕೊಲೆ ಮಾಡಿದ್ದಾರೆ. ಈಗ ನೇಣಿಗೆ ಏರಿಸಿ ಆತ್ಮಹತ್ಯೆ ಎನ್ನುತ್ತಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
23/05/2022 02:11 pm