ಲಕ್ನೋ: ತನ್ನ ಮದುವೆ ಆಮಂತ್ರಣ ಪತ್ರಿಕೆಗಳನ್ನು ನೀಡಲು ಹೋಗಿದ್ದ ಯುವತಿಯ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಘಟನೆ ಮಧ್ಯಪ್ರದೇಶದ ಪಕ್ಕದ ದಾತಿಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಅತ್ಯಾಚಾರಕ್ಕೆ ಒಳಗಾದ ಯುವತಿಯು ಉತ್ತರ ಪ್ರದೇಶ ಗಡಿ ಭಾಗ ನಿವಾಸಿ. ಏಪ್ರಿಲ್ 21ರಂದು ನಡೆಯಬೇಕಿದ್ದ ಆಕೆಯ ಮದುವೆಯ ಕಾರ್ಡ್‌ಗಳನ್ನು ವಿತರಿಸಲು ಮಧ್ಯ ಪ್ರದೇಶದ ದಾತಿಯಾ ಜಿಲ್ಲೆಯ ಗಡಿ ಭಾಗದ ಗ್ರಾಮಕ್ಕೆ ಏಪ್ರಿಲ್ 18ರಂದು ಹೋಗಿದ್ದಳು. ಈ ವೇಳೆ ಗ್ರಾಮದ ಮೂವರು ಯುವಕರು ಅವಳನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರಗೈದಿದ್ದಾರೆ. ಅಷ್ಟೇ ಅಲ್ಲದೆ ಕೆಲವು ದಿನಗಳ ಕಾಲ ಸಂತ್ರಸ್ತೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ಇಟ್ಟುಕೊಂಡಿದ್ದರು. ನಂತರದಲ್ಲಿ ಆಕೆಯನ್ನು ರಾಜಕೀಯ ಪಕ್ಷದ ನಾಯಕನಿಗೆ ಒಪ್ಪಿಸಿದ್ದರು. ನಾಯಕನೊಂದಿಗೆ 5 ದಿನಗಳ ಕಾಲ ಝಾನ್ಸಿ ಜಿಲ್ಲೆಯಲ್ಲಿ ಇರಿಸಿದ್ದಲ್ಲದೇ, ಬಳಿಕ ಯುವತಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಇರಲು ಒತ್ತಾಯಿಸಿ ಮಧ್ಯಪ್ರದೇಶದ ಪಕ್ಕದ ದಾತಿಯಾ ಜಿಲ್ಲೆಯ ಹಳ್ಳಿಗೆ ಕಳುಹಿಸಿದ್ದರು ಎಂದು ಯುವತಿಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ ದಾಖಲಾಗಿದೆ.
ಯುವತಿಯು ಹೇಗೋ ತನ್ನ ತಂದೆಯನ್ನು ದಾತಿಯಾದಿಂದ ಕರೆಸುವಲ್ಲಿ ಯಶಸ್ವಿಯಾದಳು. ನಂತರ ಆಕೆಯನ್ನು ಪೊಲೀಸರ ಸಹಾಯದಿಂದ ಪಠಾರಿ ಗ್ರಾಮದಿಂದ ರಕ್ಷಿಸಲಾಗಿದ್ದು, ಆರೋಪಿಗಳಿಗೆ ಬಲೆ ಬೀಸಲಾಗಿದೆ ಎಂದು ತೆಹ್ರಾಲಿ ಸರ್ಕಲ್ ಆಫೀಸರ್ (ಸಿಒ) ಅನುಜ್ ಸಿಂಗ್ ತಿಳಿಸಿದ್ದಾರೆ.
PublicNext
10/05/2022 01:06 pm