ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಸ್ಥಾನ ಕಾಂಗ್ರೆಸ್‌ ಸಚಿವನ ಪುತ್ರನಿಂದ ಯುವತಿ ಮೇಲೆ ರೇಪ್.!

ಜೈಪುರ್: ಯುವತಿಯ ಮೇಲೆ ಅತ್ಯಾಚಾರ ಸಂಬಂಧಿಸಿದಂತೆ ರಾಜಸ್ಥಾನದ ಕಾಂಗ್ರೆಸ್‌ ಸಚಿವ ಸಚಿವ ಮಹೇಶ್‌ ಜೋಶಿ ಪುತ್ರ ರೋಹಿತ್ ಜೋಶಿ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

23 ವರ್ಷದ ಯುವತಿ ಭಾನುವಾರ ಪೊಲೀಸರಿಗೆ ದೂರು ನೀಡಿದ್ದು, 'ರೋಹಿತ್ ಜೋಶಿ ಕಳೆದ ವರ್ಷ ಜೈಪುರ ಮತ್ತು ದೆಹಲಿಯಲ್ಲಿ ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ' ಎಂದು ಆರೋಪಿಸಿದ್ದಾರೆ.

ಈ ಸಂಬಂಧ ದಕ್ಷಿಣ ದೆಹಲಿಯ ಪೊಲೀಸರು ಆರೋಪಿ ರೋಹಿತ್ ಜೋಶಿ ವಿರುದ್ಧ ಅತ್ಯಾಚಾರ, ಬರಿಸುವ ಪದಾರ್ಥ ನೀಡಿರುವುದು, ಗರ್ಭಪಾತ, ಮದುವೆಯಾಗಲು ಬಲವಂತ, ಅಪಹರಣ, ಅನೈಸರ್ಗಿಕ ಅಪರಾಧ, ಬೆದರಿಕೆ ಮತ್ತು ಲೈಂಗಿಕ ದೌರ್ಜನ್ಯ ಎಂಬೆಲ್ಲಾ ಗುರುತರ ಆರೋಪಗಳ ಮೇಲೆ ಐಪಿಸಿಯ ವಿವಿಧ ಕಲಂಗಳಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ.

ಯುವತಿ ನೀಡಿದ ದೂರಿನಲ್ಲಿ ಏನಿದೆ?

'ಸಚಿವರ ಪುತ್ರ ಫೇಸ್‌ಬುಕ್‌ ಮೂಲಕ ನನಗೆ ಕಳೆದ ವರ್ಷ ಪರಿಚಯವಾಗಿದ್ದರು. ನಾವು ಜೈಪುರದಲ್ಲಿ ಭೇಟಿಯಾಗಿದ್ದೆವು. ನಂತರ ನನ್ನನ್ನು ಜನವರಿ 8, 2021ರಂದು ಜೈಪುರದ ಸವಾಯಿ ಮಾಧವ್ ಪುರಕ್ಕೆ ಕರೆಸಿಕೊಂಡರು. ಈ ಸಂದರ್ಭದಲ್ಲಿ ರಾತ್ರಿ ನನಗೆ ಮತ್ತು ಬರುವ ಪಾನೀಯ ಸೇವಿಸಲು ಕೊಟ್ಟಿದ್ದಾರೆ. ಮರುದಿನ ಬೆಳಗ್ಗೆದ್ದಾಗ ನಾನು ನಗ್ನವಾಗಿರುವ ಫೋಟೋ ಮತ್ತು ವಿಡಿಯೋವನ್ನು ಅವರು ನನಗೆ ತೋರಿಸಿದರು. ನನಗೆ ತುಂಬಾ ಭಯವಾಯಿತು ಮತ್ತು ನಾನು ಅಳುವುದಕ್ಕೆ ಶುರು ಮಾಡಿದೆ. ನಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ನಾವಿಬ್ಬರು ಗಂಡ, ಹೆಂಡತಿ ಎಂದು ಅವರು ನಮೂದಿಸಿದ್ದರು. ನಂತರ ಅವರು ನನ್ನನ್ನು ಮದುವೆಯಾಗುವುದಾಗಿ ಭರವಸೆ ಕೊಟ್ಟಿದ್ದರು. ನಂತರ ಕೊಠಡಿಯಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಅವರು ನನ್ನನ್ನು ನಿಂದಿಸುವುದಕ್ಕೆ ಶುರು ಮಾಡಿದರು. ನನ್ನ ಮೇಲೆ ಹಲ್ಲೆ ಮಾಡುವುದಾಗಿಯೂ, ನನ್ನ ನಗ್ನ ದೃಶ್ಯ ಸೆರೆ ಹಿಡಿಯುವುದಾಗಿಯೂ ಬೆದರಿಕೆ ಹಾಕಿದರು. ಅಷ್ಟೇ ಅಲ್ಲ, ವಿಡಿಯೋವನ್ನು ಅಪ್ಲೋಡ್‌ ಮಾಡಿ ವೈರಲ್ ಮಾಡುವುದಾಗಿಯೂ ಎಚ್ಚರಿಕೆ ನೀಡಿದರು' ಎಂದು ಸಂತ್ರಸ್ತೆ ದೂರಿದ್ದಾರೆ.

ಕಳೆದ ವರ್ಷದ ಆಗಸ್ಟ್‌ 11ರಂದು ನಾನು ಗರ್ಭವತಿಯಾಗಿದ್ದೆ. ಈ ಸಂದರ್ಭದಲ್ಲಿ ಅವರು ಮಗು ಬೇಡ ಎಂದಿದ್ದರು. ನನಗೆ ಬಲವಂತವಾಗಿ ಮಾತ್ರೆ ನೀಡಿದರು. ಆದರೆ ನಾನು ಸೇವಿಸಲಿಲ್ಲ ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

09/05/2022 10:18 am

Cinque Terre

39.38 K

Cinque Terre

9

ಸಂಬಂಧಿತ ಸುದ್ದಿ