ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕವಲಂದೆ ಮಿನಿ ಪಾಕಿಸ್ತಾನ್-ಘೋಷಣೆ ಕೂಗಿದವರ ಬಂಧನ-ನಿಲ್ಲದ ಹಿಂದೂ ಸಂಘಟನೆ ಆಕ್ರೋಶ

ಮೈಸೂರು : ನಂಜನಗೂಡು ತಾಲೂಕಿನ ಕವಲಂದ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯನ್ನೂ ಸಲ್ಲಿಸಿದ್ದರು.ಆಗೆ ಇಬ್ಬರು ಯುವಕರು ಕವಲಂದ ಅಂದ್ರೆ ಮಿನಿ ಪಾಕಿಸ್ತಾನ್ ಅಂತಲೇ ಹೇಳಿ ಬಿಟ್ಟರು. ಅದೇ ನೋಡಿ ಈಗ ಇಡೀ ಹಿಂದೂ ಸಂಘಟನೆಯನ್ನ ರೊಚ್ಚಿಗೆಬ್ಬಿಸಿದೆ.

ಕವಲಂದ ಅಂದ್ರೆ ಅದು ಮಿನಿ ಪಾಕಿಸ್ತಾನ್ ಅಂತಲೇ ವೀಡಿಯೋಂದರಲ್ಲಿ ಹೇಳಲಾಗಿತ್ತು. ಆ ವೀಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆಗಳ ಆಕ್ರೋಶ ಮುಗಿಲು ಮುಟ್ಟಿದೆ. ಹಿಂದೂ ಪರ ಸಂಘಟನೆಯ ಕಪಿಲೇಶ್ ಈ ಸಂಬಂಧ ಪೊಲೀಸರಿಗೆ ದೂರು ಕೂಡ ಕೊಟ್ಟಿದ್ದಾರೆ.

ಹಿಂದೂ ಸಂಘಟನೆಗಳ ಪಾಕಸ್ತಾನ್ ಲಾಂಚನ ಇಟ್ಟು ಪ್ರತಿಕೃತಿ ದಹನ ಕೂಡ ಮಾಡಿದ್ದಾರೆ. ಇತ್ತ ಕವಲಂದ ಬೋಲೆ ತೋ ಮಿನಿ ಪಾಕಿಸ್ತಾನ್ ಎಂದು ಹೇಳಿದ ಅನಾನ್ ಅಲಿ ಖಾನ್,ಫಯಾಜ್ ಶರೀಫ್‌ ರನ್ನ ಬಂಧಿಸಿ ಸರಿಯಾಗಿಯೇ ಡ್ರಿಲ್ ಮಾಡಿದ್ದಾರೆ. ನಂಜನಗೂಡು ಡಿವೈಎಸ್‌ಪಿ ಗೋವಿಂದರಾಜು,ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ್ ತಳವಾರ, ಕವಲಂದೆ ಪಿಎಸ್ಐ ಮಹೇಂದರ ಅವರು ಸ್ಥಳ ಮಹಜರು ಮಾಡಿದ್ದಾರೆ.

Edited By : Shivu K
PublicNext

PublicNext

06/05/2022 07:09 pm

Cinque Terre

71.16 K

Cinque Terre

24

ಸಂಬಂಧಿತ ಸುದ್ದಿ