ಕಲಬುರಗಿ: ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲಿ ಭಾಗಿ ಆಗಿದ್ದ ಮತ್ತೋರ್ವ ಆರೋಪಿ ಜ್ಯೋತಿ ಪಾಟೀಲ್ ಎಂಬುವರನ್ನು ಬಂಧಿಸಿರುವ ಪೊಲೀಸರು ಕಲಬುರಗಿ ಸಿಐಡಿ ಕಚೇರಿಗೆ ಕರೆತಂದಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಬಂಧಿತ ಜ್ಯೋತಿ ಪಾಟೀಲ್, ಶಾಂತಿಬಾಯಿ ಎಂಬ ಅಭ್ಯರ್ಥಿಯ ಅಕ್ರಮಕ್ಕೆ ಕೈ ಜೋಡಿಸಿದ ಆರೋಪ ಇದೆ. ಇದರಲ್ಲಿ ಕಿಂಗ್ ಪಿನ್ ಆರೋಪಿ ಇಂಜಿನಿಯರ್ ಮಂಜುನಾಥ್ ಪಾಟೀಲ್ ಎಂಬಾತನೂ ಭಾಗಿ ಆಗಿರುವ ಆರೋಪ ಇದೆ. ಸದ್ಯ ಶಾಂತಾಬಾಯಿ ಹಾಗೂ ಮಂಜುನಾಥ್ ಪಾಟೀಲ್ ನಾಪತ್ತೆಯಾಗಿದ್ದಾರೆ. ಈ ಇಬ್ಬರ ನಡುವಿನ ಜ್ಯೋತಿ ಪಾಟೀಲ್ ಸಿಕ್ಕಿಬಿದ್ದಿದ್ದಾರೆ.
ಬಂಧಿತ ಜ್ಯೋತಿ ಪಾಟೀಲ್ ಈ ಮುಂಚೆ ಬೆಂಗಳೂರಿನ ಗ್ರಾಮೀಣಾವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಳು ಎಂಬ ಮಾಹಿತಿ ಇದೆ.
PublicNext
28/04/2022 08:39 pm