ಚೆನ್ನೈ: ರಥೋತ್ಸವದ ವೇಳೆ ತೇರಿಗೆ ಹೈವೋಲ್ಟೇಜ್ ವಿದ್ಯುತ್ ತಂತಿ ತಗುಲಿದ ಪರಿಣಾಮ ಸುಮಾರು 10 ಭಕ್ತಾದಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನು ಹಲವರು ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ತಂಜಾವೂರ್ನಲ್ಲಿ ನಡೆದಿದೆ.
ತಂಜಾವೂರಿನ ಆಲಯ ರಥೋತ್ಸವ ಕಾರಣ ಸಮೀಪದ ಕಲಿಮೇಡು ಗ್ರಾಮದಲ್ಲಿ ಗುರುಪೂಜಾ ಕಾರ್ಯಕ್ರಮದ ಚಿತ್ರೈ ಹಬ್ಬದ ಮೆರವಣಿಗೆಯನ್ನು ನಡುರಾತ್ರಿ 12 ಗಂಟೆಯಿಂದ ಮುಂಜಾನೆವರೆಗೂ ನಡೆಸಲಾಗುತ್ತದೆ. ಮುಂಜಾನೆ 3 ಗಂಟೆ ವೇಳೆಗೆ ಮೆರವಣಿಗೆ ಸಾಗುತ್ತಿದ್ದ ವಾಹನಕ್ಕೆ ಹೈಟೆನ್ಷನ್ ವೈರ್ ತಾಗಿ ಶಾಕ್ ಸರ್ಕ್ಯೂಟ್ ಆಗಿದ್ದು, ಇದರಿಂದ ಬೆಂಕಿ ಕಾಣಿಸಿಕೊಂಡಿದೆ.
ಈ ದುರ್ಘಟನೆಯಲ್ಲಿ ಸುಮಾರು ಹತ್ತು ಭಕ್ತಾದಿಗಳು ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಥ ಸಹಿತ ಬೆಂಕಿಯಿಂದ ಸುಟ್ಟು ಕರಕಲಾಗಿವೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡರು. ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
PublicNext
27/04/2022 08:40 am