ಛತ್ತೀಸ್‌ಗಢ: ಶಾಲಾ ಕಟ್ಟಡದಲ್ಲೇ ಶಿಕ್ಷಕಿಯ ಜೊತೆಗೆ ಮುಖ್ಯಶಿಕ್ಷಕ ಲೈಂಗಿಕ ಕ್ರಿಯೆ ನಡೆಸಿದ ಘಟನೆ ಛತ್ತೀಸ್‌ಗಢದ ಕಂಕೇರ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಕಾಮುಕ ಮುಖ್ಯಶಿಕ್ಷಕನ ರಾಸಲೀಲೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಡಳಿತ ಮಂಡಳಿ ಆತನನ್ನು ಅಮಾನತುಗೊಳಿಸಿದೆ.
ಅಮಾನತುಗೊಂಡ ಶಿಕ್ಷಕನನ್ನು ರಾಜೇಶ್ ಪಾಲ್ ಎಂದು ಗುರುತಿಸಲಾಗಿದ್ದು, ಈತ ಕಂಕೇರ್ ಜಿಲ್ಲೆಯ ಇಂದ್ರಪ್ರಸ್ಥ ಗ್ರಾಮದ ಪಿವಿ 39 ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ. ರಾಜೇಶ್ ಪಾಲ್ ನಡುವಳಿಕೆ ಬಗ್ಗೆ ಗ್ರಾಮಸ್ಥರಿಗೆ ಅನುಮಾನ ವ್ಯಕ್ತವಾಗಿತ್ತು. ಇತ್ತೀಚೆಗೆ ಶಾಲೆಯ ಸ್ಟೋರ್ ರೂಂನಲ್ಲಿ ಮುಖ್ಯಶಿಕ್ಷಕ ಮತ್ತು ಮಹಿಳಾ ಶಿಕ್ಷಕಿ ಸಂಭೋಗ ಮಾಡುತ್ತಿರುವ ಬಗ್ಗೆ ಕೆಲ ಗ್ರಾಮಸ್ಥರಿಗೆ ಸಿಕ್ಕಿತ್ತು. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಕೆಲವರು ಮುಖ್ಯಶಿಕ್ಷಕನ ರಾಸಲೀಲೆ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಕೋವಿಡ್ ಅವಧಿಯಲ್ಲಿ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ಮತ್ತು ಶಾಲೆಗಳ ತರಗತಿಗಳನ್ನು ಮುಚ್ಚಿದಾಗ ಈ ಕಾಮುಕರು ತಮ್ಮ ನೀಚ ಚಟುವಟಿಕೆಗಳನ್ನು ನಡೆಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಚಂದನ್‌ಕುಮಾರ್ ಮುಖ್ಯ ಶಿಕ್ಷಕ ರಾಜೇಶ್ ಪಾಲ್‌ನನ್ನು ಅಮಾನತುಗೊಳಿಸಿ ತನಿಖೆಗೆ ಆದೇಶ ನೀಡಿದ್ದಾರೆ.
PublicNext
23/04/2022 05:03 pm