ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುತ್ತಿಗೆಗೆ ದಾರ ಕಟ್ಟಿ ಚಾಕುವಿನಿಂದ ಇರಿದು ಪತ್ನಿಯನ್ನ ಬರ್ಬರವಾಗಿ ಕೊಂದ ಪಾಪಿ.!

ರಾಮನಗರ: ಪಾಪಿಯೋರ್ವ ತನ್ನ ಪತ್ನಿಯ ಕುತ್ತಿಗೆಗೆ ದಾರ ಕಟ್ಟಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದ ಘಟನೆ ರಾಮನಗರದ ರೆಹಮಾನ್ ನಗರದಲ್ಲಿ ನಡೆದಿದೆ.

ಜಾಹಿರ್ ಪಾಷಾ (36) ಕೊಲೆಗೈದ ಆರೋಪಿ. ಮೊಬಿನಾ ಬಾನು (33) ಕೊಲೆಯಾದ ಮಹಿಳೆ. ಜಾಹಿರ್ ಪಾಷಾ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದ. ಕಳೆದ ಒಂದು ವಾರದ ಹಿಂದಷ್ಟೇ ಇಬ್ಬರು ರಾಮನಗರದ ರೆಹಮಾನ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನದಿಂದ ಪ್ರತಿ ನಿತ್ಯ ಜಗಳವಾಡುತ್ತಿದ್ದ ಎನ್ನಲಾಗಿದೆ.

ನಿನ್ನೆ (ಶನಿವಾರ) ಜಾಹಿರ್ ಪಾಷಾ ದಂಪತಿ ನಡುವೆ ಜಗಳವಾಗಿದ್ದು, ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಕೋಪಗೊಂಡ ಜಾಹಿರ್ ಪತ್ನಿಯನ್ನ ಕೊಲೆ ಮಾಡಿ ನಾಪತ್ತೆಯಾಗಿದ್ದಾನೆ. ಮೊಬಿನಾ ಬಾನು ಸಾವಿನಿಂದ ಐವರು ಮಕ್ಕಳು ಅನಾಥ. ಸ್ಥಳಕ್ಕೆ ರಾಮನಗರ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Vijay Kumar
PublicNext

PublicNext

17/04/2022 12:45 pm

Cinque Terre

69.98 K

Cinque Terre

5

ಸಂಬಂಧಿತ ಸುದ್ದಿ