ಬೆಂಗಳೂರು: ಅಂಬೇಡ್ಕರ್ ಮೆಡಿಕಲ್ ಕಾಲೇಜು ಸಂಸ್ಥಾಪಕ ಟ್ರಸ್ಟಿ ಹಾಗೂ ವೈದ್ಯರಾಗಿರುವ ಡಾ ಶಿವಲಿಂಗಯ್ಯರ ಕೊಲೆಗೆ ಯತ್ನ ನಡೆದಿದೆ. ಸದ್ಯ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೌದು 92 ವಯಸ್ಸಿನ ಅಂಬೇಡ್ಕರ್ ಮೆಡಿಕಲ್ ಕಾಲೇಜು, ಅಂಬೇಡ್ಕರ್ ದಂತ ವೈದ್ಯ ಕಾಲೇಜು, ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಸ್ಥಾಪಕ ಡಾ ಶಿವಲಿಂಗಯ್ಯರವರ ಕೊಲೆಗೆ ಯತ್ನ ನಡೆದಿದ್ದು ಸದ್ಯ ಮಣಿಪಾಲ್ ಅಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಲ್ಯೂಮಿನಿಯಂ ಅಂಶದ ಮಾತ್ರೆಗಳನ್ನು ನೀಡಿ ವಿಷ ಪ್ರಾಷನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಮೆಡಿಕಲ್ ಟೆಸ್ಟ್ ವೇಳೆ ದೇಹದಲ್ಲಿ ಜೀವಕ್ಕೆ ಅಪಾಯ ಆಗುವಷ್ಟು ಅಲ್ಯೂಮಿನಿಯಂ ಅಂಶ ಪತ್ತೆಯಾಗಿದೆ. ಸಾಮಾನ್ಯವಾಗಿ 10 MICG/L ಕಿಂತ ಕಡಿಮೆ ಅಲ್ಯೂಮಿನಿಯಂ ಅಂಶ ದೇಹದಲ್ಲಿ ಇರುತ್ತೆ. ಆದ್ರೆ ಡಾ ಶಿವಲಿಂಗಯ್ಯ ರವರ ದೇಹದಲ್ಲಿ ಮಾರ್ಚ್ 4ರಂದು ಪರೀಕ್ಷೆ ಮಾಡಿಸಿದಾಗ 26.4 MICG/L ನಷ್ಟು ಅಂಶ ಪತ್ತೆಯಾಗಿದೆ. ಬಳಿಕ 22 ಮಾರ್ಚ್ ನಲ್ಲಿ ಪರೀಕ್ಷೆ ಮಾಡಿದಾಗ 33.7 MICG/L ನಷ್ಟು ಅಂಶ ಪತ್ತೆಯಾಗಿದೆ.
ಇದೇ ರೀತಿ ಅಲ್ಯೂಮಿನಿಯಂ ಅಂಶ ಹೆಚ್ಚಾದಲ್ಲಿ ದೇಹ ಬಹು ಅಂಗಾಂಗಗಳ ವೈಫಲ್ಯದಿಂದ ಸಾವನಪ್ಪುವ ಸಾಧ್ಯತೆ ಇದೆ.
ಕಳೆದ ಹದಿನೈದು ವರ್ಷಗಳಿಂದ ಜೊತೆಗೆ ಇದ್ದು ಡಾ ಶಿವಲಿಂಗಯ್ಯ ರನ್ನು ನೋಡಿಕೊಳ್ಳುತಿದ್ದ ಧಾನಮಣಿ ಹಾಗು ಕಳೆದ 26 ವರ್ಷಗಳಿಂದ ಜೊತೆಗೆ ಇದ್ದ ವೆಂಕಟೇಶ ಮೂರ್ತಿರಿಂದ ಕೃತ್ಯ ಎಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಡಾ ಶಿವಲಿಂಗಯ್ಯರವರ ಹೆಸರಲ್ಲಿರುವ ಕೋಟ್ಯಾಂತರ ರೂ.ಆಸ್ತಿಯೇ ಈ ಕೃತ್ಯಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಪೊಲೀಸರು ಕೇಸ್ ದಾಖಲು ಮಾಡಿ ತನಿಖೆ ನಡೆಸುತಿದ್ದಾರೆ.
PublicNext
11/04/2022 03:52 pm