ಮಂಡ್ಯ: ವಿದ್ಯಾರ್ಥಿನಿ ಮುಸ್ಕಾನ್ ತಂದೆ ಈಗ ಪರಿ ಪರಿಯಾಗಿಯೇ ಬೇಡಿಕೊಳ್ಳುತ್ತಿದ್ದಾರೆ. ನಮ್ಮನ್ನ ಬದುಕಲು ಬಿಡಿ. ನಮ್ಮ ಪಾಡಿಗೆ ನಾವು ಜೀವನವನ್ನ ಮಾಡಿಕೊಂಡು ಹೋಗುತ್ತಿದ್ದೇವೆ. ನಮಗೆ ಯಾರ ಸಹಾಯವೂ ಬೇಡವೇ ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.
ಹೌದು. ಬೆಳಗ್ಗೆಯಿಂದಲೇ ವಿದ್ಯಾರ್ಥಿ ಮುಸ್ಕಾನ್ ವಿಚಾರ ಹೈಪ್ ನಲ್ಲಿಯೇ ಇದೆ. ಮೋಸ್ಟ್ ವಾಂಟೆಡ್ ಅಲ್ ಖೈದಾ ಉಗ್ರ ಜವಾಹಿರಿ ಕೊಟ್ಟ ಆ ಒಂದೇ ಒಂದು ಹೇಳಿಕೆ ಇವತ್ತು ಇಡೀ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಗಮನ ಸೆಳೆದಿದೆ.
ನಿಜ, ಹಿಜಾಬ್ ತಾರಕಕ್ಕೇರಿದ ಸಮಯದಲ್ಲಿಯೆ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್, ಅಲ್ಲಾಹು ಅಕ್ಬರ್ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಳು. ಇದನ್ನ ತಿಳಿದಿರೋ ಜವಾಹಿರಿ,ಮುಸ್ಕಾರ್ ಧೈರ್ಯವನ್ನ ಮೆಚ್ಚಿಕೊಂಡಿದ್ದಾರೆ. ದಿಟ್ಟ ಮಹಿಳೆ ಅಂತಲೂ ಕೊಂಡಾಡಿದ್ದಾರೆ. ಅರಬ್ಬಿ ಭಾಷೆಲ್ಲಿಯೇ ಹೇಳಿದ್ದಾರೆ.
ಈ ಬಗ್ಗೆ ಮುಸ್ಕಾನ್ ತಂದೆ ಮೊಹಮ್ಮದ್ ಹುಸೇನ್ ಖಾನ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮಗಳ ಬಗ್ಗೆ ಮಾತನಾಡಿ ವ್ಯಕ್ತಿ ಯಾರೂ ಅಂತ ನಮಗೆ ಗೊತ್ತಿಲ್ಲ. ನಮಗೆ ಯಾರಿಂದೂ ಏನೂ ಬೇಡ. ನಮ್ಮ ಪಾಡಿಗೆ ನಮ್ಮನ್ನ ಬಿಟ್ಟು ಬಿಡಿ ಅಂತಲೇ ಕೇಳಿಕೊಂಡಿದ್ದಾರೆ.
PublicNext
06/04/2022 08:28 pm