ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಮಂಗಳವಾರವೂ ದೇಶದಾದ್ಯಂತ ಇಂಧನ ದರದಲ್ಲಿ ಹೆಚ್ಚಳ ಮಾಡಿವೆ. ಕಳೆದ 15 ದಿನಗಳಲ್ಲಿ 13ನೇ ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರಿಗೆ 84 ಪೈಸೆಯಷ್ಟು ಹೆಚ್ಚಾಗಿದ್ದು, 110.25 ರೂಪಾಯಿಗೆ ಏರಿಕೆ ಆಗಿದೆ. ಡೀಸೆಲ್ ದರ ಲೀಟರಿಗೆ 78 ಪೈಸೆ ಹೆಚ್ಚಾಗಿದ್ದು 94.01 ರೂಪಾಯಿಗೆ ತಲುಪಿದೆ. ಮಾರ್ಚ್ 22ರಿಂದ ಏಪ್ರಿಲ್ 4ರವರೆಗೆ ಬೆಂಗಳೂರಿನಲ್ಲಿ ಪೆಟ್ರೋಲ್ ದರವು ಲೀಟರಿಗೆ 9.59 ರೂ.ನಷ್ಟು ಮತ್ತು ಡೀಸೆಲ್ ದರ 8.98 ರೂ.ನಷ್ಟು ಹೆಚ್ಚಳ ಆಗಿದೆ.
ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 84 ಪೈಸೆ ಹೆಚ್ಚಳವಾಗಿ 119.67 ರೂ. ಮತ್ತು ಡೀಸೆಲ್‌ಗೆ 85 ಪೈಸೆ ಏರಿಕೆಯಾಗಿ 103.92 ರೂ. ತಲುಪಿದೆ. ಶ್ರೀನಗರದಿಂದ ಕೊಚ್ಚಿವರೆಗೂ ಬಹುತೇಕ ನಗರಗಳಲ್ಲಿ ಲೀಟರ್ ಪೆಟ್ರೋಲ್ ದರ 110 ರೂ. ಸಮೀಪಿಸುತ್ತಿದೆ. ಹೈದರಾಬಾದ್, ಪಾಟ್ನಾ, ಭುವನೇಶ್ವರ, ತಿರುವಂತಪುರಂ, ಮುಂಬೈ, ರಾಯ್‌ಪುರ್ ಹಾಗೂ ರಾಜಸ್ಥಾನ, ಮಧ್ಯ ಪ್ರದೇಶ, ತೆಲಂಗಾಣ ರಾಜ್ಯಗಳ ಹಲವು ನಗರಗಳಲ್ಲಿ ಪ್ರತಿ ಲೀಟರ್ ಡೀಸೆಲ್ ದರ 100 ರೂ.ಗಳ ಗಡಿ ದಾಟಿದೆ.
PublicNext
05/04/2022 08:02 am