ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೀತಿಸಿ ಮದುವೆಯಾದ ಪ್ರೇಮಿಗಳ ಮೇಲೆ ಮಾರಣಾಂತಿಕ ಹಲ್ಲೆ

ಮೈಸೂರು: ಪ್ರೀತಿಸಿ ಮದುವೆಯಾದ ಪ್ರೇಮಿಗಳನ್ನು ಪೋಷಕರೇ ದೂರ ಮಾಡಿ ಹುಡುಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹುಣಸೂರು ಪಟ್ಟಣದ ಕೆಪೆ ಕಾಫಿ ಡೇ ಬಳಿ ನಡೆದಿದೆ.

ಹೌದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಕದಬಹಳ್ಳಿ ಗ್ರಾಮದ ಅಭಿಷೇಕ್, ಚೋಳೇನಹಳ್ಳಿ ಗ್ರಾಮದ ಅನನ್ಯ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದರು.

ಇದರಿಂದ ಅಸಮಧಾನಗೊಂಡ ಹುಡುಗಿಯ ಸಂಬಂಧಿಕರು ಹುಡುಗನ ಮೇಲೆ ಹಲ್ಲೆ ಮಾಡಿ ಹುಡುಗಿಯನ್ನ ಕರೆದೊಯ್ದಿದ್ದಾರೆ. ಈ ಕುರಿತು ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇನ್ನು ಪೊಲೀಸರ ಸಮ್ಮುಖದಲ್ಲೇ ಹುಡುಗಿಯ ಸಂಬಂಧಿಕರು ಆಕೆಯನ್ನು ಕರೆದುಕೊಂಡು ಹೋಗಿದ್ದಕ್ಕೆ ಅಭಿಷೇಕ್ ಕಂಗಾಲಾಗಿದ್ದಾನೆ.

Edited By : Shivu K
PublicNext

PublicNext

31/03/2022 11:08 am

Cinque Terre

47.04 K

Cinque Terre

2

ಸಂಬಂಧಿತ ಸುದ್ದಿ