ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಿಮ್ಸ್ ನಲ್ಲಿ ಬಡಿದಾಟ : ತುರ್ತು ಚಿಕಿತ್ಸಾ ಘಟಕದಲ್ಲಿ ಮಾರಾಮಾರಿ

ಬೀದರ್ : ಬ್ರಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಮಾರಾಮಾರಿ ನಡೆದಿದೆ. ಕಣ್ಣಿಗೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು ಆಸ್ಪತ್ರೆಯಲ್ಲಿರುವ ಸಾಮಗ್ರಿಗಳಿಂದ ದಾಳಿ ನಡೆಸಿದ್ದಾರೆ.

ಸದ್ಯ ದಾಳಿಯಲ್ಲಿ ನಾಲ್ವರಿಗೆ ಗಾಯವಾಗಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಹಲ್ಲೆಗೆ ಒಳಗಾದ ಮಹ್ಮದ್ ರೌಫ್, ಫಿರೋಜ್ ಖಾನ್, ಅಫಸರ್ ಖಾನ್, ಅರಬಾಜ್ ಖಾನ್, ಅಜ್ಜು ಗಂಭೀರ ಗಾಯಗೊಂಡಿದ್ದಾರೆ. ಮಹ್ಮದ್ ರೌಭ್ ಎಂಬುವವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಗೆ ರವಾನೆ ಮಾಡಲಾಗಿದೆ.

ಪ್ರಕರಣ ಕುರಿತಂತೆ ನ್ಯೂ ಟೌನ್ ಹಾಗೂ ಟೌನ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 307,353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ತುರ್ತುಚಿಕಿತ್ಸಾ ಘಟಕದಲ್ಲಿ ನಡೆದ ಈ ಮಾರಾಮಾರಿಗೆ ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಫ್ರೇರೋಜ್ ಖಾನ್ ಹಾಗೂ ಅವರ ಮಕ್ಕಳ ಹಣಕಾಸು ವ್ಯವಹಾರವೇ ಕಾರಣ ಎನ್ನಲಾಗಿದೆ.

Edited By : Shivu K
PublicNext

PublicNext

24/03/2022 05:07 pm

Cinque Terre

111.68 K

Cinque Terre

2