ಮಹಾರಾಷ್ಟ್ರ: ಥಾಣೆ ಜಿಲ್ಲೆಯ ವಿಠ್ಠಲವಾಡಿ ರೈಲು ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ರೈಲು ಹಳಿ ಮೇಲೆ ಜಿಗಿದ ಯುವಕನನ್ನ ಪೊಲೀಸ್ ಕಾನ್ಸ್ಟೇಬಲ್ ರಕ್ಷಿಸಿದ ಘಟನೆ ಈಗ ಭಾರಿ ಮೆಚ್ಚುಗೆಗೂ ಪಾತ್ರವಾಗಿದೆ.
ಹೌದು. ನಿಜಕ್ಕೂ ಇದು ಮೆಚ್ಚುಗೆಯ ಕೆಲಸವೇ ಆಗಿದೆ. ರೈಲು ಬರುವ ಸಮಯವನ್ನ ನೋಡಿಕೊಂಡೇ ಯುವ ನಿಲ್ದಾಣದಲ್ಲಿ ಪ್ಲಾಟ್‌ಫಾರಂ ಮೇಲೆ ನಿಂತಿದ್ದನು.
ಇನ್ನೇನೂ ರೈಲು ಹತ್ತಿರ ಬರಬೇಕು ಆಗಲೇ ಹಳಿ ಮೇಲೆ ಜಿಗಿದು ಮಲಗಿಕೊಂಡೇ ಬಿಟ್ಟ. ಇದನ್ನ ಗಮನಿಸಿದ ಅಲ್ಲಿಯೇ ಇದ್ದ ಪೊಲೀಸ್ ಕಾನ್ಸ್ಟೇಬಲ್ ತಕ್ಷಣವೇ ಅರ್ಲಟ್ ಆಗಿಯೇ ಹಳಿ ಮೇಲೆ ಜಿಗಿದು ಯುವಕನನ್ನ ರಕ್ಷಿಸಿಯೇ ಬಿಟ್ಟರು.
ಈ ಘಟನೆಯ ಆ ಒಂದು ವೀಡಿಯೋವನ್ನ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿ ADG ನವನೀತ್ ಸೆಕೆರಾ ತಮ್ಮ ಟ್ವಿಟ್ ಪೇಜ್ ನಲ್ಲೂ ಹಂಚಿಕೊಂಡಿದ್ದಾರೆ. ಪೊಲೀಸ್ ಕಾನ್ಸ್ಟೇಬಲ್ ಈ ಶ್ಲಾಘನೀಯ ಕಾರ್ಯಕ್ಕೆ ಪ್ರಶಸ್ತಿಯ ಗೌರವ ಸಲ್ಲಲೇಬೇಕು ಅಂತಲೂ ಹೇಳಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
24/03/2022 12:55 pm