ನವದೆಹಲಿ: ದೆಹಲಿಯ ದ್ವಾರಕಾದಲ್ಲಿ ಎಂಟು ವರ್ಷದ ಬಾಲಕನಿಗೆ ಥಳಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 42 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಸತಿ ಕಟ್ಟಡದ ಟೆರೇಸ್ ಮೇಲೆ ಮಾರ್ಚ್ 13ರಂದು ಬಾಲಕ ಆಟವಾಡುತ್ತಿದ್ದ. ಈ ವೇಳೆ ಮಹಿಳೆಯು ಹುಡುಗನನ್ನು ಯಾರು ಇಲ್ಲದ ಜಾಗಕ್ಕೆ ಕರೆದೊಯ್ದಿದ್ದಾಳೆ. ಇದಕ್ಕೆ ಬಾಲಕ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಆತನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಅಷ್ಟೇ ಅಲ್ಲದೆ ಅವನ ಖಾಸಗಿ ಭಾಗಗಳಲ್ಲಿ ವಸ್ತುವನ್ನು ಸೇರಿಸುವ ಮೂಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
23/03/2022 04:30 pm