ಇಸ್ಲಾಮಾಬಾದ್: ಪಾಪಿಗಳ ಆಸ್ತಾನ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಶೋಷಣೆ ನಡೆಯುತ್ತಲೇ ಇದೆ. ಅಷ್ಟೇ ಅಲ್ಲದೆ ಹಿಂದೂ ಬಾಲಕಿಯರು, ಯುವತಿಯರನ್ನು ಅಪಹರಿಸಿ ಬಳಿಕ ಮತಾಂತರಗೊಳಿಸಿ ಮದುವೆಯಾದ ಬಗ್ಗೆ ಸಾಕಷ್ಟು ಸುದ್ದಿಗಳನ್ನು ಓದಿದ್ದೇವೆ. ಈಗ ಅಂಥದ್ದೇ ಒಂದು ಘಟನೆ ಸಿಂಧ್ ಪ್ರಾಂತ್ಯದ ಸುಕ್ಕೂರ್ ಅನ್ನೋ ಪ್ರದೇಶದಲ್ಲಿ ನಡೆದಿದೆ.
ವಾಹಿದ್ ಲಾಶರಿ ಅನ್ನೋ ವ್ಯಕ್ತಿಯು 18 ವಯಸ್ಸಿನ ಪೂಜಾ ಕುಮಾರಿ ಓಧ್ ಅನ್ನೋ ಯುವತಿಯನ್ನ ಅಪಹರಣ ಮಾಡಿ ಹಾಗೂ ಬಲವಂತದ ಮತಾಂತರಕ್ಕೆ ಯತ್ನಿಸಿದ್ದ. ಆದರೆ ಅಪಹರಣದ ವೇಳೆ ಯುವತಿ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಪಾಪಿಯು ನಿಷ್ಕರುಣೆಯಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಪಾಕಿಸ್ತಾನದ ಕೆಲ ಮಾಧ್ಯಮಗಳು ವರದಿ ಮಾಡಿವೆ.
ಸಿಂಧ್ ಪ್ರಾಂತ್ಯದಲ್ಲಿ ಪ್ರತಿವರ್ಷ ಮುಖ್ಯವಾಗಿ ಅಲ್ಪಸಂಖ್ಯಾತ ಸಮುದಾಯವಾಗಿರುವ ಹಿಂದೂ, ಸಿಖ್ ಮಹಿಳೆಯರನ್ನು ಉಗ್ರಗಾಮಿಗಳು ಅಪಹರಿಸಿ, ಬಲವಂತವಾಗಿ ಮತಾಂತರಗೊಳಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಸಮುದಾಯ ಬಲವಂತದ ವಿವಾಹ ಮತ್ತು ಮತಾಂತರದ ಸಮಸ್ಯೆಯನ್ನು ದೀರ್ಘಕಾಲದಿಂದ ಎದುರಿಸುತ್ತಿದೆ. 2013ರಿಂದ 2019ರ ನಡುವೆ 156 ಬಲವಂತದ ಮತಾಂತರ ಪ್ರಕರಣ ನಡೆದಿದೆ ಎಂದು ಸೆಂಟರ್ ಫಾರ್ ಸೋಶಿಯಲ್ ಜಸ್ಟೀಸ್ ತಿಳಿಸಿದೆ.
PublicNext
22/03/2022 02:18 pm