ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನಗೆ ಅನ್ಯಾಯವಾಗಿದೆ ಸಿಎಂ ಮುಂದೆ ವಿಷ ಕುಡಿಯಲು ಮುಂದಾದ ವೃದ್ಧ

ಬೆಂಗಳೂರು : ನನಗೆ ಪೊಲೀಸರಿಂದ ಅನ್ಯಾಯವಾಗಿದೆ ಎಂದು ವೃದ್ಧನೊಬ್ಬ ಗಂಭೀರ ಆರೋಪ ಮಾಡಿ ಸಿಎಂ ಎದುರೇ ವಿಷ ಸೇವಿಸಲು ಮುಂದಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸುಂಕದಕಟ್ಟೆಯ ಚಂದ್ರಶೇಖರ್ ಎಂಬ ವೃದ್ಧ ಪೊಲೀಸರಿಂದ ನನಗೆ ಅನ್ಯಾವಾಗಿದೆ ಎಂದು ತನ್ನ ಅಳಲನ್ನು ತೋಡಿಕೊಂಡು ವಿಷ ಸೇವಿಸಲು ಮುಂದಾಗಿದ್ದಾರೆ.

ಹೌದು ಪೊಲೀಸರು ಕೆಲವರ ಜತೆ ಸೇರಿ ಸೈಟ್ ಮಾರಾಟದಲ್ಲಿ ಚಂದ್ರಶೇಖರ್ ಅವರಿಗೆ ಮೋಸ ಮಾಡಿದ್ದಾರೆ ಎಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿರುದ್ಧ ಆರೋಪ ಮಾಡಲಾಗಿದೆ.ನನಗೆ ನ್ಯಾಯ ಕೊಡಿ ಎಂದು ಸಿಎಂ ಎದುರು ಅಳಲು ತೋಡಿಕೊಂಡು ಬಾಟಲಿಯಲ್ಲಿ ತಂದಿದ್ದ ವಿಷ ಸೇವಿಸಲು ಮುಂದಾಗುತ್ತಿದ್ದಂತೆ ಪೊಲೀಸರು ತಡೆದಿದ್ದಾರೆ.

ಒಟ್ಟಿನಲ್ಲಿ ಸೈಟ್ ಮಾರಾಟದಲ್ಲಿ ಲಕ್ಷಾಂತರ ರೂ ಮೋಸ ಆಗಿದೆ. ಇದರಲ್ಲಿ ಪೊಲೀಸರೂ ಶಾಮೀಲಾಗಿ ಮೋಸ ಮಾಡಿದ್ದಾರೆಂದು ಆರೋಪಿಸಿರುವ ಚಂದ್ರಶೇಖರ ಅವರಿಗೆ ನ್ಯಾಯ ಸಿಗಬಹುದೇ ಎಂಬುವುದನ್ನು ಕಾದು ನೋಡಬೇಕಿದೆ.

Edited By : Nirmala Aralikatti
PublicNext

PublicNext

18/03/2022 03:22 pm

Cinque Terre

28.3 K

Cinque Terre

0

ಸಂಬಂಧಿತ ಸುದ್ದಿ