ಬೆಂಗಳೂರು: ಬಟ್ಟೆ ಅಂಗಡಿಯಲ್ಲಿ ಹಣ ದೋಚಿದ ನಂತರ ಎ.ಸಿ ಡೆಕ್ಟ್ ಮೂಲಕ ಎಸ್ಕೇಪ್ ಆಗಿದ್ದ ಕಳ್ಳನನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಜಿಗಣಿ ಮೂಲದ ಆರೋಪಿ ಆನಂದ, ಜನವರಿ 31 ರಂದು ಸಂಪಿಗೆ ರಸ್ತೆಯ 'ಪ್ರಶಾಂತಿ ಸ್ಯಾರಿ ಸೆಂಟರ್'ನಲ್ಲಿ ಗ್ರಿಲ್ ಮುರಿದು ಒಳಹೋಗಿದ್ದ. ನಂತರ ಲಾಕರ್‌ನಲ್ಲಿದ್ದ 6.5 ಲಕ್ಷನಗದು ಮತ್ತು ಬಟ್ಟೆ ದೋಚಿ ಎಸಿ ಡೆಕ್ಟ್ ಮೂಲಕ ಎಸ್ಕೇಪ್ ಆಗಿದ್ದ. ಎಸ್ಕೇಪ್ ಆಗುವಾಗ ಸುಳಿವು ಸಿಗಬಾರದು ಅಂತ ಸಿಸಿಟಿವಿ ಡಿವಿಆರ್ ಅನ್ನೂ ಈ ಮಹಾಶಯ ಹೊತ್ತೊಯ್ದಿದ್ದ .
ಈ ಸಂಬಂಧ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಆನಂದನ ವಿರುದ್ಧ ಭಾರತಿನಗರ, ಜೆಬಿ ನಗರ, ಮೈಕೋ ಲೇಔಟ್ ಸೇರಿದಂತೆ ರಾಜ್ಯದ ಮಂಡ್ಯ, ಶಿವಮೊಗ್ಗದ ಠಾಣೆಯಲ್ಲೂ ಪ್ರಕರಣಗಳಿದ್ದು, ಸದ್ಯ ಆರೋಪಿಯಿಂದ 5.8 ಲಕ್ಷ ರೂ ನಗದನ್ನು ವಶಕ್ಕೆ ಪಡೆಯಲಾಗಿದೆ.
PublicNext
05/03/2022 05:05 pm