ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೈಕ್ ಸ್ಪೇರ್ ಪಾರ್ಟ್ಸ್ ಶೋರೂಂಗೆ ನುಗ್ಗಿದ ಕಳ್ಳರು

ಹುಬ್ಬಳ್ಳಿ: ದ್ವಿಚಕ್ರ ವಾಹನ ಸ್ಪೇರ್ ಪಾರ್ಟ್ಸ್ ಶೋರೂಂನಲ್ಲಿ ಕಳ್ಳರು ಕೈಚಳಕ ತೋರಿಸಿ ಪರಾರಿಯಾಗಿರುವ ಘಟನೆ ನಗರದ ಕಾಟನ್ ಮಾರ್ಕೆಟ್ ನ ರಾಜಧಾನಿ ಮೋಟರ್ಸ್ ನಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಪ್ರಕಾಶ ಬಫನಾ ಎಂಬುವವರಿಗೆ ಸೇರಿದ್ದ ಈ ಶೋರೂಂ ಆಗಿದ್ದು, ಅಪರಿಚಿತರು ಇಂದು ಬೆಳಿಗ್ಗೆ ಶೋರೂಂ ಗೆ ನುಗ್ಗಿ ಹಣದ ಬೀರು ಒಡೆದು ಅಲ್ಲಿದ್ದ ಲಕ್ಷಾಂತರ ರೂಪಾಯಿಯನ್ನು ಲಪಟಾಯಿಸಿದ್ದಾರೆ.

ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By :
PublicNext

PublicNext

09/02/2022 02:21 pm

Cinque Terre

33.97 K

Cinque Terre

1

ಸಂಬಂಧಿತ ಸುದ್ದಿ