ಮಂಡ್ಯ:ಮಾಸ್ಕ್ ಧರಿಸದೇ ಓಡಾಡುತ್ತಿದ್ದ ವ್ಯಕ್ತಿಗೆ ದಂಡ ವಿಧಿಸಲು ಮುಂದಾದಾಗ ASI ಮೇಲೇನೆ ವ್ಯಕ್ತಿಯೊಬ್ಬ ಹಲ್ಲೆಗೆ ಪ್ರಯತ್ನಸಿದ ಘಟನೆ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ.
ASI ಮೇಲೆ ಹಲ್ಲೆಗೆ ಯತ್ನಿಸಿದ್ದ ವ್ಯಕ್ತಿಯನ್ನ ಶಾಂತಿನಗರದ ನಿವಾಸಿ ನಾಗೇಶ್ ಎಂದು ಗುರುತಿಸಲಾಗಿದೆ. ರಾಜಾ ಮೆಡಿಕಲ್ ಬಳಿ ಮಾಸ್ಕ್ ಧರಿಸದೇ ಬಂದಿದ್ದ ನಾಗೇಶ್ ನಿಂದ ಪೊಲೀಸರು ದಂಡ ವಸೂಲಿಗೆ ಮುಂದಾಗಿದ್ದಾರೆ.ಆದರೆ ಇದಕ್ಕೆ ಒಪ್ಪದ ನಾಗೇಶ್ ಪೊಲೀಸರ ಜೊತೆಗೆ ಮಾತಿಗೆ ಮಾತು ಬೆಳೆಸಿದ್ದಾರೆ. ASIಯನ್ನ ಎಳೆದಾಡಿ ಹಲ್ಲೆಗೂ ಯತ್ನಿಸಿದ್ದಾನೆ. ಪೊಲೀಸರು ಈಗ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ನಾಗೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
PublicNext
05/02/2022 11:03 pm