ಯಲಹಂಕ : ಟೆಂಡರ್ ಸಾಮಾಜಿಕ ಜಾಲ ತಾಣದ ಮೂಲಕ ಮಹಿಳೆಯರನ್ನು ಸಂಪರ್ಕ ಮಾಡಿ ಮಹಿಳೆಯರ ನಂಬರ ಪಡೆದು ಅವರ ಮನೆಗೆ ತೆರಳಿ ಬಲವಂತವಾಗಿ ಮಹಿಳೆಯರ ವಿವಸ್ತ್ರಗೊಳಿಸಿದ ಫೋಟೊ ತೆಗೆದು ಬ್ಲಾಕ್ಮೇಲ್ ಮಾಡುತ್ತಿದ್ದ ಘಟನೆವೊಂದು ಯಲಹಂಕದಲ್ಲಿ ನಡೆದಿದೆ.
ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫೆ.1 ರಂದು ರಾಜಸ್ಥಾನ ಮೂಲದ 33 ವರ್ಷದ ಸುಶಾಂತ್ ಜೈನ್ ಎಂಬ ವ್ಯಕ್ತಿ ಮಹಿಳೆಯೋರ್ವಳಿಗೆ ಕಾಲ್ ಮಾಡಿ ಆಕೆಯ ಮನೆಗೆ ಹೋದ ವ್ಯಕ್ತಿ ಆಕೆಯನ್ನು ಪುಸಲಾಯಿಸಿ ಬಟ್ಟೆ ಬಿಚ್ಚಿಸಿ ಖಾಸಗಿ ಪೋಟೋಗಳನ್ನು ಶೂಟ್ ಮಾಡಿಕೊಂಡು ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ.
ಸಂತ್ರಸ್ಥ ಮಹಿಳೆ ಕೊಡಿಗೇಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಸದ್ಯ ಪೊಲೀಸರು ಆರೋಪಿಯನ್ನು ನಗರದ H.S.R ಲೇಔಟ್ ನಲ್ಲಿ ಬಂಧಿಸಿ, ಬಂಧಿತನಿಂದ 3 ಮೊಬೈಲ್, 3.60 ಲಕ್ಷ ನಗದು ವಶಕ್ಕೆ ಪಡೆದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
PublicNext
04/02/2022 01:17 pm