ಶಿರಸಿ (ಉತ್ತರ ಕನ್ನಡ): ಕಾಯಂ ಉಪನ್ಯಾಸಕ ಹುದ್ದೆ ಕೊಡಿಸೋದಾಗಿ ಯುವಕನ್ನು ಕೋಣೆಯೊಂದರಲ್ಲಿ ನಗ್ನಗೊಳಿಸಿ ಮಹಿಳೆಯ ಜೊತೆ ಲೈಂಗಿಕ ಕ್ರಿಯೆ ನಡೆಸುವ ವಿಡಿಯೋ ಚಿತ್ರಿಕರಿಸಿ ಬ್ಲ್ಯಾಕ್ ಮೇಲ್ ಮಾಡಿ ಭಯಾನಕ ಘಟನೆವೊಂದು ಬಹಿರಂಗವಾಗಿದೆ.
ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಅಜಿತ್ ಶ್ರೀಕಾಂತ ನಾಡಿಗ್ (25), ಧನುಷ್ಯ ದಿಲೀಪ್ ಕುಮಾರ ಶೆಟ್ಟಿ ಶಿರಸಿ (25) ಹಾಗೂ ಪದ್ಮಜಾ ಡಿ.ಎನ್. ಶಿವಮೊಗ್ಗ (50) ರನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪೊಲೀಸರು ಬಂಧಿಸಿದ್ದಾರೆ.
ಯುವಕನಿಂದ 15 ಲಕ್ಷ ಬೇಡಿಕೆ ಇಟ್ಟ ಗ್ಯಾಂಗ್ ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಸಂಬಂಧ ದೂರು ದಾಖಲಾಗುತ್ತಿದ್ದಂತೆ ಶಿರಸಿ ಡಿ.ಎಸ್.ಪಿ. ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿ.ಪಿ.ಐ. ರಾಮಚಂದ್ರ ನಾಯಕ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
PublicNext
04/02/2022 08:27 am