ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಸ್ಕಾಂನಲ್ಲಿ ಕೋಟಿ ಕೋಟಿ ಅವ್ಯವಹಾರ : 20 ಅಧಿಕಾರಿಗಳು ಅಮಾನತು

ಬೆಂಗಳೂರು : ಸರ್ಕಾರದ ಕೆಲಸ ದೇವರ ಕೆಲಸ ಎನ್ನುತ್ತಾರೆ ಆದ್ರೆ ಸದ್ಯದ ಸ್ಥಿತಿಯೇ ಬೇರೆಯಾಗಿದೆ. ಸದ್ಯ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ ) ವ್ಯಾಪ್ತಿಯ ಅಥಣಿ ವಿಭಾಗದಲ್ಲಿ ನಡೆದ ಕಾಮಗಾರಿಗಳಲ್ಲಿ ಕೋಟಿ ಕೋಟಿ ಅವ್ಯವಹಾರ ಸಂಬಂಧ ತನಿಖೆ ನಡೆಸಿರುವ ಇಂಧನ ಇಲಾಖೆ ಅಕ್ರಮಕ್ಕೆ ಕಾರಣರಾದ 20 ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಏಳು ಜನರಿಗೆ ವರ್ಗಾವಣೆ ಶಿಕ್ಷೆ ನೀಡಿದೆ.

ಸುಮಾರು 86 ಕೋಟಿ ರೂ. ಮೊತ್ತದ ಅವ್ಯವಹಾರಕ್ಕೆ ಅಧಿಕಾರಿಗಳು ಕಾರಣರಾಗಿದ್ದು, ಇದರಿಂದ ಇಲಾಖೆಗೆ ಆಥಿಕ ನಷ್ಟವಾಗುವ ಜತೆಗೆ ಸಾರ್ವಜನಿಕರಿಗೆ ಅಗತ್ಯವಾದ ಕಾಮಗಾರಿಗಳ ಗುಣಮಟ್ಟದಲ್ಲೂ ನ್ಯೂನ್ಯತೆ ಸೃಷ್ಟಿಯಾಗಿತ್ತು. ಈ ಸಂಬಂಧ ತನಿಖಾ ತಂಡ ನೀಡಿದ ವರದಿಯ ಶಿಫಾರಸಿನ ಅನ್ವಯ ಹೆಚ್ಚುವರಿ ಕಾರ್ವನಿರ್ವಾಹಕ ಎಂಜಿನಿಯರ್ ಸೇರಿ 20 ಜನರನ್ನು ಅಮಾನತುಗೊಳಿಸುವಂತೆ ಕನ್ನಡ-ಸಂಸ್ಕೃತಿ ಮತ್ತು ಇಂಧನ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಆದೇಶ ನೀಡಿದ್ದಾರೆ.

2018 ರಿಂದ 2021ರ ಅವಧಿಯಲ್ಲಿ ನಡೆದ ಯುಎನ್ ಐಪಿ, ಕಾಪೆಕ್ಸ್, ಗಂಗಾ ಕಲ್ಯಾಣ, ನೀರು ಸರಬರಾಜು, ಓಟಿಎಂ, ಪ್ರಧಾನಮಂತ್ರಿ ಗ್ರಾಮೀಣ ವಿದ್ಯುದೀಕರಣ ಯೋಜನೆ ಸೇರಿದಂತೆ ನಾಗರಿಕರಿಕರಿಗೆ ನೇರವಾಗಿ ಸಂಬಂಧಪಟ್ಟ ಕಾಮಗಾರಿಗಳಲ್ಲಿ ಅವ್ಯವಹಾರ ಎಸಗಿರುವುದು ಇಲಾಖೆ ನಡೆಸಿದ ಆಂತರಿಕ ತನಿಖೆಯಿಂದ ಸ್ಪಷ್ಟವಾಗಿದೆ.

ಯಾರ ಅಮಾನತು..?

- ಹೆಚ್ಚುವರಿ ಕಾರ್ಯ ನಿರ್ವಾಹಕ ಎಂಜಿನಿಯರ್‌

- ನಾಲ್ವರು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌

- 12 ಶಾಖಾಧಿಕಾರಿಗಳು, ಒಬ್ಬ ಲೆಕ್ಕಾಧಿಕಾರಿ,

- ಸಹಾಯಕ ಲೆಕ್ಕಾಧಿಕಾರಿ ಹಾಗೂ ಒಬ್ಬ ಕೇಸ್‌ ವರ್ಕರ್‌

Edited By : Nirmala Aralikatti
PublicNext

PublicNext

26/01/2022 10:23 pm

Cinque Terre

91.23 K

Cinque Terre

23