ತುಮಕೂರು: ರಾಜಕೀಯದಲ್ಲಿ ಗುಂಪು ಗಲಾಟೆ ಇವೆಲ್ಲಾ ಕಾಮನ್, ಅದರಲ್ಲೂ ಗ್ರಾಮ ಪಂಚಾಯಿತಿ ಅಂದ್ರೆ ಅಲ್ಲಿ ರಾಜಕೀಯದ ಕಾವು ಸ್ವಲ್ಪ ಜಾಸ್ತಿನೇ ಇರುತ್ತೆ. ಇನ್ನು ಧಮ್ಕಿ ಹಾಕುವುದು, ಗೂಂಡಾ ವರ್ತನೆ ತೋರುವುದು, ಆವಾಜ್ ಹಾಕುವುದು ಗಂಡಸರು ಮಾತ್ರ ಅಂತ ನಾವೆಲ್ಲಾ ಅಂದುಕೊಂಡ್ರೆ ಅದು ತಪ್ಪು.
ಇಲ್ಲೊಬ್ರು ಲೇಡಿ ಮೆಂಬರ್ ತೋರಿದ ದರ್ಪ ನೋಡಿದ್ರೆ ಎಂತವರಿಗೂ ಶಾಕ್ ಆಗುತ್ತೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ತಾವರೆಕೆರೆ ಪಂಚಾಯ್ತಿ ಸದಸ್ಯೆ ಗೌರಮ್ಮ ಪಕ್ಕಾ ಗಂಡಸರ ರೇಂಜಿನಲ್ಲಿ ದರ್ಪ ತೋರಿರುವ ಘಟನೆಯ ಸ್ಟೋರಿ ತೋರಿಸುತ್ತೇವೆ ನೋಡಿ.
ಸದ್ಯ ಗ್ರಾಮ ಸಭೆಯಲ್ಲಿ ಮಾಜಿ ಸದಸ್ಯನ ಹಲ್ಲೆಗೆ ಮುಂದಾಗಿದ್ದ ಗೌರಮ್ಮ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ. ಕಳೆದ ಕೆಲ ದಿನಗಳ ಹಿಂದೆ ನಡೆದ ಗ್ರಾಮ ಸಭೆಯಲ್ಲಿ ಈ ಘಟನೆ ನಡೆದಿದೆ. ಇನ್ನೂ ಈ ಗೌರಮ್ಮ ಮೇಲೆ ಇದೊಂದೆ ಅಲ್ಲ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದು, ಪರಿಶಿಷ್ಟ ಜನಾಂಗದ ಕುಟುಂಬವರ ಮೇಲೆ ಹಲ್ಲೆ ಮಾಡಿರೋ ಆರೋದಡಿ ಎಫ್ ಐ ಆರ್ ಕೂಡ ದಾಖಲಾಗಿದೆ.
ಒಟ್ಟಿನಲ್ಲಿ ಹೆಸರಿನಲ್ಲಿ ಮಾತ್ರ ಗೌರಮ್ಮ ಆಗಿರುವ ಇವರ ವಿಡಿಯೋ ನೋಡ್ತಿದ್ರೆ ಯಾವ ರೌಡಿಗೂ ಕಮ್ಮಿ ಇಲ್ಲ ಬಿಡಮ್ಮ ಎನ್ನುವುದು ಕಾಣುತ್ತದೆ.
PublicNext
25/01/2022 05:46 pm