ಯಾದಗಿರಿ: ಹೆಮ್ಮಾರಿ ಕೊರೊನಾದಿಂದ ಮೃತಪಟ್ಟ ಸಂಬಂಧಿಕರಿಗೆ ಪರಿಹಾರ ಕೊಡಿಸುವುದಾಗಿ 1.65 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಯಶ್ ಕುಮಾರ ಬಂಧಿತ ಆರೋಪಿ. ರೇವಣಸಿದ್ದಪ್ಪ ಆನೆಗುಂದಿ ಅವರ ಕುಟುಂಬಸ್ಥರೊಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದರು. ಅವರಿಗೆ ಸರ್ಕಾರದಿಂದ 15 ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಯಶ್ ಕುಮಾರ್ ಭರವಸೆ ನೀಡಿದ್ದ. ಅಷ್ಟೇ ಅಲ್ಲದೆ ಕಚೇರಿ ಖರ್ಚಿಗೆಂದು 1.65 ಲಕ್ಷ ರೂ. ಮುಂಗಡ ಹಣ ಪಡೆದು ಪರಾರಿಯಾಗಿದ್ದ.
ಈ ಸಂಬಂಧ ರೇವಣಸಿದ್ದಪ್ಪ ಆನೆಗುಂದಿ ಅವರು ಶಹಾಪುರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
PublicNext
25/01/2022 03:39 pm