ಮಂಡ್ಯ:ಬಡವರ ಪಡಿತರ ಅಕ್ಕಿಯನ್ನೂ ಬಿಡ್ತಿಲ್ಲ ಅಕ್ಕಿ ಪಾಲಿಶ್ ದಂಧೆಕೋರರು. ಹೌದು. ತಹಶೀಲ್ದಾರ ಚಂದ್ರಶೇಖರ್
ಇಲ್ಲಿಯ ಅಕ್ಕಿ ಮಿಲ್ ದಾಳಿ ಮಾಡಿದರು. ಆಗಲೇ ಬಡವರ ಅಕ್ಕಿಯನ್ನ ಪಾಲಿಶ್ ಮಾಡಿ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಸ್ಫೋಟಕ ವಿಷಯ ಈಗ ಬೆಳಕಿಗೆ ಬಂದಿದೆ.
ಮಂಡ್ಯದ ಕಾಳೇಗೌಡ ರೈಸ್ ಮಿಲ್ ಮೇಲೆ ತಹಶೀಲ್ದಾರ ಚಂದ್ರಶೇಖರ್ ದಾಳಿ ನಡೆಸಿದರು.ಆಗಲೇ ಇಲ್ಲಿ ಪಡಿತರ ಅಕ್ಕಿಯನ್ನ ಪಾಲಿಶ್ ಮಾಡಿ ಮಾರಾಟ ಮಾಡ್ತಿರೋ ವಿಷಯ ತಿಳಿದು ಬಂದಿದೆ. ಹೆಚ್ಚು ಕಡಿಮೆ 15 ಟನ್ ಪಾಲಿಶ್ ಮಾಡಿರೋ
ಪಡಿತರ ಅಕ್ಕಿ ಮೂಟೆ ಸಿಕ್ಕಿವೆ.
ಇವುಗಳ ಬಗೆಗಿನ ಬಿಲ್ ಪರಿಶೀಲನೆ ಮಾಡುವಂತೆ ಆಹಾರ ಇಲಾಖೆಗೆ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ. ಕಾಳೇಗೌಡ ರೈಸ್ ಮಿಲ್ ಮಾಲೀಕರ ವಿರುದ್ಧ ಮಂಡ್ಯ ಪಶ್ಚಿಮ ಠಾಣೆಯಲ್ಲಿ ದೂರುಕೊಡಲಾಗಿದೆ. ಅಕ್ಕಿ ತುಂಬಿದ್ದ KA 17 B 6517 ಕ್ಯಾಂಟರ್ ಮಾಲೀಕ, ಚಾಲಕನ ವಿರುದ್ಧವೂ ದೂರ ನೀಡಲಾಗಿದೆ. ಸದ್ಯ ಮೂವರ ವಿರುದ್ಧ FIR ದಾಖಲಿಸಿ ಪೊಲೀಶರು ತನಿಖೆಗೆ ಮುಂದಾಗಿದ್ದಾರೆ.
PublicNext
23/01/2022 09:18 am