ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಫೋಟಕವಸ್ತುಗಳ ವಶ : ಮುಂದುವರಿದ ತನಿಖೆ

ಬಾಗಲಕೋಟೆ: ಜಿಲ್ಲೆಯ ಹೊನ್ನಾಕಟ್ಟಿ ಗ್ರಾಮದ ನಾರಾ ಮತ್ತು ಕಂಕನಮೇಲಿ ಎಂಬುವವರು ಲೀಜ್ ಪಡೆದಿದ್ದ ತೋಟದ ಮನೆಯಲ್ಲಿ ಅಪಾರ ಪ್ರಮಾಣದ 250ಕೆಜಿ ಲಘು ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.

ಗಂಧಕ ಮತ್ತು ಸೋಡಿಯಂ ನೈಟ್ರೇಟ್, ಚಾರ್ಲಕೋಲ್ ಪೌಡರ್ ಪತ್ತೆಯಾಗಿದ್ದು ಈ ಪೌಡರ್ ಗಳನ್ನು ಬಳಸಿ ಸ್ಫೋಟಕ ತಯಾರಿಸಲು ಆರೋಪಿಗಳು ಮುಂದಾಗಿದ್ದರು. ಕಲ್ಲು ಗಣಿಗಾರಿಕೆಗಾಗಿ ಅಪಾರ ಪ್ರಮಾಣದ ಸ್ಫೋಟಕ ತಂದಿಟ್ಟಿರುವ ಶಂಕೆ ಇದ್ದು, ಸ್ಫೋಟಕ ವಸ್ತುಗಳ ಪತ್ತೆ ಬೆನ್ನಲ್ಲೇ ಸ್ಥಳಕ್ಕೆ ಎಸ್ಪಿ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿದೆ.

Edited By : Shivu K
PublicNext

PublicNext

20/01/2022 01:35 pm

Cinque Terre

151.03 K

Cinque Terre

2

ಸಂಬಂಧಿತ ಸುದ್ದಿ