ಕೊಪ್ಪಳ: ತಾಲೂಕಿನ ಟಣಕನಕಲ್ ಗ್ರಾಮದಲ್ಲಿ ಸ್ಟೋನ್ ಕ್ರಷರ್ ಕ್ವಾರಿಯಲ್ಲಿ ಬ್ಲಾಸ್ಟ್ ಆಗಿ ಸ್ಪಲ್ಪದರಲ್ಲೇ ಭಾರಿ ದುರುಂತ ತಪ್ಪಿದಂತಾಗಿದೆ.ಬ್ಲಾಸ್ಟ್ ಮಾಡುವುದನ್ನು ರೈತರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಬ್ಲಾಸ್ಟ್ ವಿರೋಧಿಸಿ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೂ ಕಲ್ಲು ತಗುಲಿದೆ.ಕ್ವಾರಿ ಸುತ್ತಲೂ ತೋಟಗಾರಿಗೆ ಮಾಡುತ್ತಿರೋ ರೈತರಿಂದ ಬ್ಲಾಸ್ಟ್ ಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆಯಾದ್ರು ಅದರ ನಡುವೆಯೇ ಕಲ್ಲು ಬ್ಲಾಸ್ಟ್ ಮಾಡಲಾಗಿದೆ. ವಿರೋಧದ ನಡುವೆ ಬ್ಲಾಸ್ಟ ಮಾಡಿದ್ದರಿಂದ ಪೊಲೀಸ್ ಠಾಣೆಯಲ್ಲಿ ರೈತರು ಜಮಾಯಿಸಿದ್ದಾರೆ.
PublicNext
12/01/2022 11:28 am