ಮುಂಬೈ:ಬಾಲಿವುಡ್‌ನ ಕಿಂಗ್ ಖಾನ್ ಶಾರುಕ್ ಮುಂಬೈ ಮನೆ ಮನ್ನತ್ ಅನ್ನ ಬಾಂಬ್ ಇಟ್ಟು ಬ್ಲಾಸ್ಟ್ ಮಾಡ್ತೀನಿ ಅಂತ ಆರೋಪಿಯನ್ನ ಪೊಲೀಸರು ಈಗ ಬಂಧಿಸಿದ್ದಾರೆ.
ಮುಂಬೈ ಪೊಲೀಸ್ ಕಂಟ್ರೋಲ್ ರೂಮ್ ಗೆ ಜನವರಿ-06 ರಂದು ಅನಾಮದೇಯ ಕರೆ ಬಂದಿತ್ತು. ಆ ಕಡೆಯಿಂದ ಮಾತನಾಡಿದ ವ್ಯಕ್ತಿ ಬೆದರಿಕೆ ಹಾಕಿದ್ದ. ಮುಂಬೈನ ಶಾರುಕ್ ಮನೆಯನ್ನ ಬ್ಲಾಸ್ಟ್ ಮಾಡುತ್ತೇನೆ ಅಂತಲೂ ಆವಾಜ್ ಹಾಕಿದ್ದ. ಮುಂಬೈನ ಬೇರೆ ಕಡೆಗಳೆಲ್ಲೂ ಬಾಂಬ್ ಇಟ್ಟು ಸ್ಪೋಟಿಸುವುದಾಗಿಯೂ ಹೇಳಿದ್ದ.
ಹೌದು. ಈ ಕರೆಯನ್ನೇ ಟ್ರೇಸ್ ಮಾಡಿದ ಪೊಲೀಸರು,ಕರೆ ಮಾಡಿದ ವ್ಯಕ್ತಿಯನ್ನ ಮಧ್ಯಪ್ರದೇಶ ಜಬಲ್‌ಪುರನ ಜಿತೇಶ್ ಠಾಕೂರ್ ನನ್ನ ಬಂಧಿಸಿದ್ದಾರೆ.
ಸಾಮಾಜಿಕ ತಾಣದಲ್ಲಿ ಶಾರುಕ್ ವಿರುದ್ಧ ಈ ಜಿತೇಶ್ ಟ್ವೀಟ್ ಮಾಡುತ್ತಲೇ ಇದ್ದ. ಆದರೆ ಪೊಲೀಸರಿಗೆ ಕರೆ ಮಾಡಿ ಈಗ ಸಿಕ್ಕಿಬಿದ್ದಿದ್ದಾನೆ.
PublicNext
12/01/2022 11:24 am