ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಮ್ಮಿ-ಡ್ಯಾಡಿಗೆ ಮುಖ ತೋರ್ಸೋಕೆ ಆಗ್ತಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಯುವತಿ

ನವದೆಹಲಿ: ವೈದ್ಯಕೀಯ ಪರೀಕ್ಷೆಯಲ್ಲಿ ಫೇಲ್ ಆದ ಕಾರಣಕ್ಕೆ ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ದೆಹಲಿಯ 'ಐಟಿಒ'ನಲ್ಲಿರುವ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜಿನ ದಿವ್ಯಾ ಯಾದವ್(19) ಎಂಬ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದವಳು.

ಇತ್ತೀಚೆಗೆ ನಡೆದ ಎರಡು ಪರಿಕ್ಷೆಗಳಲ್ಲಿ ದಿವ್ಯಾ ಅನುತ್ತೀರ್ಣಗೊಂಡಿದ್ದಳು. ಇದರಿಂದ ಆಕೆ ಖಿನ್ನತೆಗೊಳಗಾಗಿದ್ದಳು. ನಾನು ಫೇಲ್ ಆಗಿದ್ದೀನಿ. ನನ್ನ ಪೋಷಕರು ನನಗಾಗಿ ಕಷ್ಟಪಡುತ್ತಿದ್ದಾರೆ. ಅವರಿಗೆ ಹೇಗೆ ಮುಖ ತೋರಿಸಲಿ ಎಂದು ದಿವ್ಯಾ ತನ್ನ ಸಹಪಾಠಿಗಳ ಮುಂದೆ ಹೇಳುತ್ತಿದ್ದಳು ಎನ್ನಲಾಗಿದೆ.

ಬೆಳಿಗ್ಗೆ ಹಾಸ್ಟೆಲ್‌ನ ಕೋಣೆಯಲ್ಲಿ ಯಾರೂ ಇಲ್ಲದ ವೇಳೆ ಒಳಗಿನಿಂದ ಚಿಲಕ ಹಾಕಿಕೊಂಡು ದಿವ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೋಣೆಯಲ್ಲಿ ಶೋಧಿಸಿದಾಗ ರಿಜಿಸ್ಟರ್‌ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Edited By : Nagaraj Tulugeri
PublicNext

PublicNext

31/12/2021 08:28 pm

Cinque Terre

48.66 K

Cinque Terre

1

ಸಂಬಂಧಿತ ಸುದ್ದಿ