ತಿರುವನಂತಪುರ: ಅಮ್ಮನನ್ನ ಹೊಡೆಯುತ್ತಿದ್ದ ವ್ಯಕ್ತಿಯನ್ನ ತಡೆಯಲು ಆಗದೇ ಅಪ್ರಾಪ್ತ ಮಕ್ಕಳು ಆ ವ್ಯಕ್ತಿಯನ್ನ ಕೊಲೆ ಮಾಡಿದ ಘಟನೆ ಕೇರಳದ ವಯನಾಡು ಜಿಲ್ಲೆಯ ಅಂಬಳವಯಲ್ ಪ್ರದೇಶದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನ 79 ವರ್ಷದ ಮೊಹಮ್ಮದ್ ಕೋಯಾ ಅಂತಲೇ ಗುರುತಿಸಲಾಗಿದೆ.ತಮ್ಮ ಮುಂದೇನೆ ಅಮ್ಮನನ್ನ ಹೊಡೆಯುತ್ತಿರುವುದನ್ನು ಕಂಡ ಮಕ್ಕಳು ವಿರೋಧಿಸಿದ್ದಾರೆ. ಅದು ಸಾಧ್ಯವಾಗದೇ ಇದ್ದಾಗ ಕೊಡಲಿಯಿಂದ ಆ ವ್ಯಕ್ತಿಯನ್ನ ಕೊಚ್ಚಿ ಬಿಟ್ಟಿದ್ದಾರೆ.
ಈ ಘಟನೆ ತಿಳಿದ ಬಳಿಕ ಪೊಲೀಸರು ಬಾವಿಯಲ್ಲಿದ್ದ ಶವವನ್ನ ತೆಗೆದಿದ್ದಾರೆ. ಬಾಲಕಿಯರು ತಪ್ಪನ್ನ ಒಪ್ಪಿಕೊಂಡಿದ್ದಾರೆ. ವಿಚಾರಣೆ ವೇಳೆ ಇನ್ನೊಂದು ವಿಷಯವೂ ತಿಳಿದು ಬಂದಿದೆ. ಮಕ್ಕಳನ್ನ ಮೃತ ವ್ಯಕ್ತಿ ಅತಿಯಾಗಿಯೇ ಹಿಂಸಿಸುತ್ತಿದ್ದನಂತೆ. ಅದಕ್ಕೇನೆ ಮಕ್ಕಳು ಆ ಸಿಟ್ಟಿನಲ್ಲಿಯೇ ಕೊಂದು ಹಾಕಿದ್ದಾರೆ ಅಂತಲೂ ಶಂಕಿಸಲಾಗಿದೆ.
PublicNext
31/12/2021 03:38 pm