ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಮಿಕ್ರಾನ್ ಆತಂಕ-ಚುನಾವಣೆ ಮುಂದೂಡಿಕೆ ಇಲ್ಲ ಎಂದ ಚುನಾವಣೆ ಆಯುಕ್ತ

ಉತ್ತರ ಪ್ರದೇಶ:ಇಡೀ ದೇಶದಲ್ಲಿ ಕೋವಿಡ್ ರೂಪಾಂತರಿ ಒಮಿಕ್ರಾನ್ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಮುಂದೂಡಲಾಗುವುದು ಅನ್ನೋ ಸುದ್ದಿ ಇದೆ. ಆದರೆ ಆಯುಕ್ತ ಸುಶೀಲ್ ಚಂದ್ರ ಈಗ ಅಧಿಕೃತ ಮಾಹಿತಿ ನೀಡಿದ್ದಾರೆ. ಚುನಾವಣೆ ಮುಂದೂಡೋದಿಲ್ಲ. ಕೋವಿಡ್ ನಿಯಮ ಪಾಲಿಸಿಯೇ ಚುನಾವಣೆ ಮಾಡಲಾಗುವುದು ಅಂತಲೇ ಹೇಳಿದ್ದಾರೆ.

ಉತ್ತರ ಪ್ರದೇಶ ಸೇರಿದಂತೆ ಗೋವಾ,ಉತ್ತರಾಖಂಡ ಮತ್ತು ಪಂಜಾಬ್ ರಾಜ್ಯಗಳಲ್ಲಿ ಚುನಾವಣೆ ನಡೆಯಬೇಕಿದೆ.ಅದಕ್ಕೇನೆ ಇವತ್ತು ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಪ್ರೆಸ್ ಮೀಟ್ ಮಾಡಿದ್ದಾರೆ. ಚುನಾವಣೆ ಮುಂದೂಡಿಕೆಯ ವದಂತಿಗೆ ತೆರೆ ಎಳೆದಿದ್ದಾರೆ. ಕೋವಿಡ್ ನಿಯಮದ ಪ್ರಕಾರವೇ ಎಲ್ಲ ರಾಜ್ಯದ ಚುನಾವಣೆ ನಡೆಯುತ್ತವೆ ಅಂತಲೇ ಹೇಳಿದ್ದಾರೆ.

ವಿಶೇಷವಾಗಿಯೇ 80 ವರ್ಷದ ಮೇಲ್ಪಟ್ಟ ಹಾಗೂ ಡಯಾಬಿಟಿಸ್ ಇರೋ ಮತದಾರರಿಗೆ ಮನೆಯಿಂದಲೇ ವೋಟ್ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ.ಕೋವಿಡ್ ಸೋಂಕಿರೋರು ಕೂಡ ಮನೆಯಿಂದಲೇ ಮತದಾನ ಮಾಡಬಹುದು. ಅವರಿಗೂ ಕೋವಿಡ್ ನಿಯಮದಂತೇನೆ ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುವುದು ಅಂತಲೇ ವಿವರಿಸಿದ್ದಾರೆ ಸುಶೀಲ್ ಚಂದ್ರ.

ಜನವರಿ-5 ರಂದು ಚುನಾವಣೆ ಪಟ್ಟಿ ಕೂಡ ಬಿಡುಗಡೆ ಆಗುತ್ತದೆ ಅಂತಲೂ ಈ ಮಹತ್ವದ ಪ್ರೆಸ್ ಮೀಟ್ ನಲ್ಲಿಯೇ ಹೇಳಿದ್ದಾರೆ ಸುಶೀಲ್ ಚಂದ್ರ.

Edited By :
PublicNext

PublicNext

30/12/2021 02:50 pm

Cinque Terre

38.41 K

Cinque Terre

2