ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ರ‍್ಯಾಗಿಂಗ್‌ ಗೆ ಬಲಿಯಾದಳೆ 17 ರ ಹುಡುಗಿ ರಾಧಿಕಾ ?

ಚಿತ್ರದುರ್ಗ:ರ‍್ಯಾಗಿಂಗ್‌ಅನ್ನೋದು ಒಂದು ಪಿಡುಗು. ಇದು ಹೋಗ್ತಾನೇ ಇಲ್ಲ. ಚಿತ್ರದದುರ್ಗದ 17 ರ ಹುಡುಗಿಯೊಬ್ಬಳು ಈಗ ಈ ರ‍್ಯಾಗಿಂಗ್‌ ಪಿಡುಗಿಗೆ ಬಲಿಯಾಗಿದ್ದಾಳೆ.

ಹೊಸದುರ್ಗದ ತಾಲೂಕಿನ ಕೋಡಿಹಳ್ಳಿಗಟ್ಟಿ ಗ್ರಾಮದ ವಿಜಯಕುಮಾರ್ ಅವರ ಪುತ್ರಿ ವಿ.ರಾಧಿಕಾನೆ ಈ ರ‍್ಯಾಗಿಂಗ್‌ ಪಿಡುಗಿಗೆ ಬಲಿಯಾಗಿದ್ದಾಳೆ.

ಪಾಣಿಕಿಟ್ಟದಹಳ್ಳಿ ಮತ್ತು ಶೀರೆಕಟ್ಟೆ ಗ್ರಾಮದ ಯುವಕರಾದ ಸುದೀಪ್,ಕೋಟೇಶ್, ಅಭಿಷೇಕ್ ಎಂಬ ಯುವಕರನ್ನ ಪೊಲೀಸರು ಬಂಧಿಸಿದ್ದಾರೆ.ಜೈಲಿಗೂ ಅಟ್ಟಿದ್ದಾರೆ.

ಪಿಯುಸಿ ಓದುತ್ತಿದ್ದ ರಾಧಿಕಾಗಳನ್ನ ದಿನವೂ ಇವರು ಕಾಡಿಸುತ್ತಿದ್ದರು. ಕಲ್ಲು ಹೊಡೆದು ಚೇಡಿಸುತ್ತಿದ್ದರು. ಅದಕ್ಕೇನೆ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಳೆ ಎಂದು ರಾಧಿಕಾ ತಂದೆ ವಿಜಯಕುಮಾರ್ ಹೊಸದುರ್ಗ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಅದರ ಆಧಾರದ ಮೇಲೆ ಮುತ್ತಪ್ಪ ಅನ್ನೋ ಮತ್ತೊಬ್ಬ ಯುವಕ ಸೇರಿ ಒಟ್ಟು ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ.

Edited By :
PublicNext

PublicNext

29/12/2021 03:37 pm

Cinque Terre

69.16 K

Cinque Terre

1

ಸಂಬಂಧಿತ ಸುದ್ದಿ