ಹಾಸನ: ಪೊಲೀಸ್ ಠಾಣೆಗೆ ನುಗ್ಗಿ ಮಹಿಳಾ ಕಾನ್ಸಟೇಬಲ್ ಜೊತೆ ದುರ್ವರ್ತನೆ ಆರೋಪದ ಮೇಲೆ ಆರು ಜನರ ವಿರುದ್ಧ ಕೇಸ್ ದಾಖಲು ಮಾಡಿರುವಂತಹ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆ ಠಾಣೆಯಲ್ಲಿ ನಡೆದಿದೆ.
ತಾಲ್ಲೂಕಿನ ಮಟ್ಟನವಿಲೆ ಗ್ರಾಮದ ಕುಮಾರ್ ಮತ್ತು ನಾಲ್ವರ ವಿರುದ್ದ ಕೇಸ್ ದಾಖಲಾಗಿದ್ದು. ಗ್ರಾಮದಲ್ಲಿ ವ್ಯಕ್ತಿಯೊಬ್ಬ ರ ಜೊತೆಗೆ ಜಗಳಮಾಡಿಕೊಂಡು ಠಾಣೆಗೆ ಬಂದು ಗಲಾಟೆ ಮಾಡಿ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಜೊತೆಗೆ ಅನುಚಿತ ವರ್ತನೆ ಹಿನ್ನೆಯಲ್ಲಿ ಕುಮಾರ್ ಸೇರಿ ಇಬ್ಬರು ಮಹಿಳೆಯರು ಹಾಗು ಇತರ ಮೂವರನ್ನು ಬಂಧಿಸಲಾಗಿದೆ.
ಠಾಣೆಗೆ ನುಗ್ಗಿ ದುಂಡಾವರ್ತನೆ ತೋರಿಸಿದ ವೀಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು,
ಹಿರಿಸಾವೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
PublicNext
28/12/2021 03:45 pm