ದೇವನಹಳ್ಳಿ:ಗುದನಾಳದಲ್ಲಿ ಕ್ಯಾಪ್ಸುಲ್ ಗಳನ್ನ ಇಟ್ಟುಕೊಂಡು ಕ್ಯಾಪ್ಸುಲ್ ನೊಳಗೆ ಚಿನ್ನ ಕಳ್ಳ ಸಾಗಣಿಕೆ ಮಾಡುತ್ತಿದ್ದ ಮಹಿಳೆಯನ್ನ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಆರೋಪಿಯಿಂದ 535 ಗ್ರಾಂ ತೂಕದ 26.11 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ.
ಮಂಗಳವಾರ ರಾತ್ರಿ 9: 30 ಕ್ಕೆ ಶಾರ್ಜಾದಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಏರ್ ಅರೇಬಿಯಾ ಜಿ9 498 ವಿಮಾನದಲ್ಲಿ ಬಂದ ಮಹಿಳಾ ಪ್ರಯಾಣಿಕೆಯನ್ನ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾಗ ಆಕೆ ತನ್ನ ಗುದನಾಳದಲ್ಲಿ ಕ್ಯಾಪ್ಸುಲ್ ಗಳನ್ನ ಅಡಗಿಸಿಕೊಂಡು ಕ್ಯಾಪ್ಸುಲ್ ಗಳಲ್ಲಿ ಚಿನ್ನವನ್ನ ಕಳ್ಳ ಸಾಗಣಿಕೆ ಮಾಡುತ್ತಿದ್ದ ಪ್ರಕರಣವನ್ನ ಪತ್ತೆ ಮಾಡಿದ್ದಾರೆ.
ಸುಡಾನ್ ದೇಶದ ಪಾಸ್ ಪೋರ್ಟ್ ಹೊಂದಿದ ಆಕೆ ವೈದಕೀಯ ವೀಸಾದಲ್ಲಿ ಭಾರತದಕ್ಕೆ ಬಂದಿದ್ದಳು, ಏರ್ ಪೋರ್ಟ್ ಟರ್ಮಿನಲ್ ಅನುಮಾನಸ್ಪದ ರೀತಿಯಲ್ಲಿ ಕಂಡ ಆಕೆಯನ್ನ ವಿಚಾರಣೆ ನಡೆಸಿದ್ದಾಗ ಚಿನ್ನ ಕಳ್ಳಸಾಗಾಣಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
PublicNext
24/12/2021 07:28 am