ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಐಡಿ ಸೋಗಿನಲ್ಲಿ ಬಂದು ವೃದ್ದೆಯ ಸರ ಎಗರಿಸಿ ಪರಾರಿಯಾದ ಕಳ್ಳರು

ತುಮಕೂರು: ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ಬೈಕಲ್ಲಿ ಬಂದಿದ್ದ ಮೂವರು ಕಳ್ಳರು ವೃದ್ದೆಯ ಸರ ಕಳವು ಮಾಡಿರುವಂತಹ ಪ್ರಕರಣ

ಪಾವಗಡ ಪಟ್ಟಣದ ಪ್ರವಾಸಿ ಮಂದಿರದ ಬಳಿ ನಡೆದಿದೆ.

ಅಕ್ಕಮ್ಮ ಎಂಬುವವರ ೩೫ ಗ್ರಾಂ ಚಿನ್ನದ ಸರವನ್ನು ಕಳ್ಳರು ಎಗರಿಸಿದ್ದಾರೆ.ಕಳ್ಳರು ಎಷ್ಟರ ಮಟ್ಟಿಗೆ ಚಾಲಕಿಗಳೆಂದರೆ

ಸರಗಳ್ಳತನ ಪ್ರಕರಣ ಹೆಚ್ಚಾಗುತ್ತಿದೆ ಹಾಗಾಗಿ ಸರ ಸೆರಗಿನಲ್ಲಿ ಕಟ್ಟಿಕೊಳ್ಳಿ ಎಂದು ಹೇಳಿದ್ದಾರೆ ಬಳಿಕ ತಾವೇ ಕಟ್ಟಿಕೊಡೋದಾಗಿ ಹೇಳಿ ಸೆರಗಿನಲ್ಲಿ ಕಲ್ಲು ಇರಿಸಿ ಖದೀಮರು ಪರಾರಿಯಾಗಿದ್ದಾರೆ.

ವೃದ್ದೆ ಅಕ್ಕಮ್ಮ ಮನೆಗೆ ಬಂದು ನೋಡಿದಾಗ ಸೆರಗಿನಲ್ಲಿ ಕಲ್ಲು ಇರೋದು ಪತ್ತೆಯಾಗಿದೆ.ಈ ಸಂಬಂಧ ಪಾವಗಡ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
PublicNext

PublicNext

23/12/2021 11:40 am

Cinque Terre

50.24 K

Cinque Terre

0

ಸಂಬಂಧಿತ ಸುದ್ದಿ