ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೊಲೀಸ್ ಸ್ಟೇಷನ್ ನಿಂದ ಎಸ್ಕೇಪ್ ಆದ ವ್ಯಕ್ತಿ ಅಪಘಾತದಲ್ಲಿ ಸಾವು

ಬೆಂಗಳೂರು: ನಿನ್ನೆ ಶಕ್ತಿವೇಲು ಎಂಬಾತನ ಪತ್ನಿ ಸಂಗೀತ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು ಈ ಪ್ರಕರಣದಲ್ಲಿ ಆರೋಪಿಯನ್ನ ಕೆ ಆರ್ ಪುರಂ ಪೊಲೀಸ್ರು ಬಂಧಿಸಿದ್ದರು.ಇಂದು ಆತ ಠಾಣೆಯಿಂದ ಎಸ್ಕೇಪ್ ಆಗಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಕೆ ಆರ್ ಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಂದು ಮುಂಜಾನೆ ಆರೋಪಿ ಶೌಚಾಲಯಕ್ಕೆ ಹೋಗಬೇಕು ಎಂದಿದ್ದ, ಈ ವೇಳೆ ಲಾಕಪ್ ನಿಂದ ಪೊಲೀಸ್ರು ಬಿಟ್ಟಿದ್ದರು ಆ ಸಮಯದಲ್ಲಿ ಪೊಲೀಸ್ರ ಕಣ್ ತಪ್ಪಿಸಿ ಈತ ಎಸ್ಕೇಪ್ ಆಗಿದ್ದು,ಪೊಲೀಸ್ರು ಈತನನ್ನು ಹಿಂಬಾಲಿಸಿದ್ದಾರೆ ಈ ವೇಳೆ ಟಿನ್ ಫ್ಯಾಕ್ಟರಿ ಬ್ರಿಡ್ಜ್ ಬಳಿ ಅಪಘಾತ ಸಂಭವಿಸಿ ಆರೋಪಿ ಸಾವನ್ನಪ್ಪಿದ್ದಾನೆ. ಈ ಕುರಿತು ಕೆ ಆರ್ ಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
PublicNext

PublicNext

20/12/2021 04:56 pm

Cinque Terre

94.5 K

Cinque Terre

2

ಸಂಬಂಧಿತ ಸುದ್ದಿ