ಮೈಸೂರು: 5 ತಿಂಗಳ ಗರ್ಭಿಣಿ ಹೆಂಡತಿಯನ್ನು ಕಪಿಲಾ ನದಿಯಲ್ಲಿ ಮುಳುಗಿಸಿದ ಪಾಪಿ ಪತಿ ಕೊಲೆ ಮಾಡಿದ್ದಾನೆ. ದೇವಿ (28) ಎಂಬಾಕೆ ಕೊಲೆಯಾದ ದುರ್ದೈವಿ.
ಮೈಸೂರು ಜಿಲ್ಲೆ ನಂಜನಗೂಡು ಕಪಿಲಾ ನದಿಯಲ್ಲಿ ಘಟನೆ ನಡೆದಿದೆ. ನಂಜನಗೂಡು ತಾಲೂಕು ಮುದ್ದಳ್ಳಿ ರಾಜೇಶ್ ಎಂಬಾತ ಕೊಲೆಗೈದ ಆರೋಪಿ. ಎರಡು ಮಕ್ಕಳ ಸಹಿತ ಹೆಂಡತಿಯನ್ನು ನೀರಿನಲ್ಲಿ ಮುಳುಗಿಸಿ ಕೊಲೆಗೆ ಯತ್ನಿಸಿದ್ದ. ಮಕ್ಕಳ ಅರಚಾಟ ಕೇಳಿ ಧಾವಿಸಿ ಬಂದ ಸ್ಥಳೀಯರು ತಕ್ಷಣ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಅಷ್ಟರಲ್ಲಿ ಪತ್ನಿಯ ಪ್ರಾಣ ಹಾರಿಹೋಗಿದೆ.
ನಂಜನಗೂಡು ಪೊಲೀಸರು ಆರೋಪಿ ರಾಜೇಶನನ್ನ ಬಂಧಿಸಿದ್ದಾರೆ.
PublicNext
15/12/2021 01:42 pm