ಹೈದರಾಬಾದ್: ನಾವು ಸಿಬಿಐ ಅಧಿಕಾರಿಗಳು. ನಿಮ್ಮ ಮನೆಯಲ್ಲಿ ದಾಖಲೆ ಪತ್ರ ಪರಿಶೀಲನೆ ನಡೆಸಬೇಕಿದೆ ಎಂದು ಹೇಳಿ ಮನೆಯೊಂದಕ್ಕೆ ನುಗ್ಗಿದ ಖದೀಮರು ಹಣ, ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ. ಇಂತದ್ದೊಂದು ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ರಿಯಲ್ ಎಸ್ಟೇಟ್ ಉದ್ಯಮಿಯ ಮನೆಗೆ ಬಂದ ಖದೀಮರು ತಾವು ಸಿಬಿಐ ಅಧಿಕಾರಿಗಳು ಎಂದು ಹೇಳಿದ್ದಾರೆ. ಅದರಂತೆಯೇ ನಟಿಸಿ ಸಿಬಿಐ ಅಧಿಕಾರಿಗಳೆಂದು ಹೇಳಿ ಬಂದು, ಮನೆ ಪರಿಶೀಲಿಸುವ ನೆಪದಲ್ಲಿ ಬೀರು ಬಾಗಿಲು ತೆಗೆದು ಅದರಲ್ಲಿದ್ದ 1.35 ಕೆ.ಜಿ ಚಿನ್ನ ಹಾಗೂ 2 ಲಕ್ಷ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಉದ್ಯಮಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
PublicNext
15/12/2021 12:09 pm